Thursday, June 25, 2026
HomeUncategorizedಒಡ ಹುಟ್ಟಿದ ಅಣ್ಣನಿಂದಲೇ ನಿರಂತರ ಅತ್ಯಾಚಾರ: 7 ತಿಂಗಳ ಗರ್ಭಿಣಿಯಾದ ಅಪ್ರಾಪ್ತೆ

ಒಡ ಹುಟ್ಟಿದ ಅಣ್ಣನಿಂದಲೇ ನಿರಂತರ ಅತ್ಯಾಚಾರ: 7 ತಿಂಗಳ ಗರ್ಭಿಣಿಯಾದ ಅಪ್ರಾಪ್ತೆ

- Advertisement -
- Advertisement -

ಚಿಕ್ಕಮಗಳೂರು:  ಒಡ ಹುಟ್ಟಿದ ಅಣ್ಣನೇ ತಂಗಿ ಮೇಲೆ ನಿರಂತರ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ದಂಪತಿಯ ಪುತ್ರನಾಗಿರುವ ಆರೋಪಿಗೆ ಮೂವರು ಸಹೋದರಿಯರು ಇದ್ದಾರೆ. ಓದುವುದನ್ನು ಬಿಟ್ಟಿದ್ದ ಆರೋಪಿ 7ನೇ ತರಗತಿ ಓದುತ್ತಿದ್ದ 13 ವರ್ಷದ ಕೊನೆಯ ತಂಗಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ.

ಬಾಲಕಿಗೆ 15 ದಿನಗಳಿಂದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಸ್ಕ್ಯಾನಿಂಗ್ ಮಾಡಿದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!