Thursday, June 4, 2026
Homeಕರಾವಳಿಕಡಬದ ಹೇರ ಎಂಬಲ್ಲಿ ನಸುಕಿನ ವೇಳೆ ಚಿರತೆ ದಾಳಿ: ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು

ಕಡಬದ ಹೇರ ಎಂಬಲ್ಲಿ ನಸುಕಿನ ವೇಳೆ ಚಿರತೆ ದಾಳಿ: ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲು

- Advertisement -
- Advertisement -

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಇಂದು ನಸುಕಿನ ವೇಳೆ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ .

ಹೇರ ನಿವಾಸಿಗಳಾದ ಚಂದ್ರಶೇಖರ ಹಾಗೂ ಸೌಮ್ಯ ಕಾಮತ್ ಅವರು ರಾತ್ರಿ ತೋಟದ ಸ್ಪಿಂಕ್ಲೇರ್ ಬದಲಾಯಿಸುವಲ್ಲಿ ನಿರತರಾಗಿರುವ ವೇಳೆ ಚಿರತೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಗಾಯಗೊಂಡಿರುವ ಚಂದ್ರಶೇಖರ ಹಾಗೂ ಸೌಮ್ಯ ಕಾಮತ್ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ಸದ್ಯ ತೋಟದೊಳಗೆ ಅವಿತಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯಾ ಇಲಾಖೆಯವರು ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯುವ ಸಿದ್ಧತೆ ನಡೆಸಲು ಕ್ರಮ ಕೈಗೊಂಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಜನ ಚಿರತೆ ಇರೋದಾಗಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ರು. ಆದರೆ ಚಿರತೆ ಪತ್ತೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಏಕಾಏಕಿ ಚಿರತೆ ದಾಳ ಮಾಡಿದ್ದರಿಂದ ಸುತ್ತಮುತ್ತಲಿನ ಜನ ಮನೆಯಿಂದ ಆಚೆ ಬರೋದಕ್ಕೆ ಹೆದರುವಂತಾಗಿದೆ.

- Advertisement -

Latest News

error: Content is protected !!