Thursday, June 4, 2026
Homeತಾಜಾ ಸುದ್ದಿಮಕ್ಕಳಿಗೆ ಊಟ ನೀಡುವ ವಿಚಾರದಲ್ಲಿ ಪತ್ನಿಯೊಂದಿಗೆ ಕಲಹ-ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ಆತ್ಮಹತ್ಯೆಗೆ ಶರಣು

ಮಕ್ಕಳಿಗೆ ಊಟ ನೀಡುವ ವಿಚಾರದಲ್ಲಿ ಪತ್ನಿಯೊಂದಿಗೆ ಕಲಹ-ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಮುಂಬೈ: ಇಲ್ಲಿನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹ ಸಾವಿಗೆ ಕಾರಣ ಎನ್ನಲಾಗಿದೆ. ಮಕ್ಕಳಿಗೆ ಊಟ ನೀಡುವ ವಿಚಾರದಲ್ಲಿ ಪತ್ನಿಯೊಂದಿಗೆ ಕಲಹ ಏರ್ಪಟ್ಟ ಬಳಿಕ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ ತ್ರಿಪಾಠಿ(37 ) ಮಕ್ಕಳಿಗೆ ಊಟ ನೀಡುವ ಬಗ್ಗೆ ಪತ್ನಿಯೊಂದಿಗೆ ವಾಗ್ವಾದ ನಡೆಸಿದ್ದರು. ಆ ನಂತರ ಅವರು ಮಲಗುವ ಕೋಣೆಗೆ ಹೋಗಿ ಟವೆಲ್ ಬಳಸಿ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡರು ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!