ಬೆಂಗಳೂರು:ಈಗಾಗಲೇ ತೆಲುಗು ಚಿತ್ರರಂಗ ತಮ್ಮಲ್ಲಿ ಡಬ್ಬಿಂಗ್ ಚಿತ್ರಗಳ ಬಗ್ಗೆ ಹೊಸ ನಿರ್ಧಾರ ತೆಗೆದುಕೊಂಡಿದೆ.ಇದರನ್ವಯ ಕನ್ನಡ ಚಿತ್ರಗಳ ಬಿಡುಗಡೆಗೆ ಟಾಲಿವುಡ್ ನಲ್ಲಿ ಅಡ್ಡಿ ಯುಂಟಾಗುತ್ತಿದೆ.ಇದರ ವಿರುದ್ಧ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ತೆಲುಗು ಸಿನಿಮಾದ ಹೊಸ ನೀತಿ ವಿರುದ್ಧ ಅವರು ಇಂದು ಫಿಲಂ ಚೇಂಬರ್ ಗೆ ದರ್ಶನ್ ದೂರು ನೀಡಲಿದ್ದಾರೆ.
ಕನ್ನಡ ಯಾವುದಾದರೂ ಸಿನಿಮಾ ರಿಲೀಸ್ ಆದರೆ ಅದೇ ದಿನ ತೆಲುಗಿಗೆ ಡಬ್ ಆದ ಸಿನಿಮಾ ಬಿಡುಗಡೆ ಆಗಬಾರದು ಎಂಬುದು ತೆಲುಗು ಚಿತ್ರರಂಗದ ವಾದ. ಆದ್ರೆ ತೆಲುಗು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕನ್ನಡ ಭಾಷೆಯ ಅನೇಕ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಕಾಯುತ್ತಿದ್ದು ಈ ಪಟ್ಟಿಯಲ್ಲಿ ದರ್ಶನ್ ಅಭಿನಯ ‘ರಾಬರ್ಟ್’ ಕೂಡ ಸೇರುವ ಸಾಧ್ಯತೆ ಇದೆ.
ಈ ಚಿತ್ರ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ.ತೆಲುಗು ಚಿತ್ರರಂಗದ ಹೊಸ ನೀತಿಯಿಂದ ಕನ್ನಡ ಚಿತ್ರಗಳಿಗೆ ಸಮಸ್ಯೆಯಾಗಲಿದೆ ಎಂದು ನಟ ದೂರಿನಲ್ಲಿ ತಿಳಿಸಲಿದ್ದಾರೆ.


