Sunday, June 7, 2026
Homeಕರಾವಳಿಸುರತ್ಕಲ್ ನಲ್ಲಿ ಮುಸ್ಲಿಂ ಯುವಕನಿಗೆ ಚೂರಿ ಇರಿತ ಪ್ರಕರಣ; ಪೊಲೀಸರಿಂದ ಮೂವರ ಬಂಧನ

ಸುರತ್ಕಲ್ ನಲ್ಲಿ ಮುಸ್ಲಿಂ ಯುವಕನಿಗೆ ಚೂರಿ ಇರಿತ ಪ್ರಕರಣ; ಪೊಲೀಸರಿಂದ ಮೂವರ ಬಂಧನ

- Advertisement -
- Advertisement -

ಸುರತ್ಕಲ್: ಮಂಗಳೂರಿನ ಸುರತ್ಕಲ್ ನಲ್ಲಿ ನಿನ್ನೆ ತಡರಾತ್ರಿ ಬಸ್ ನಿರ್ವಾಹಕ ಜಾಬೀರ್ ಗೆ ದುಷ್ಕರ್ಮಿಗಳ ತಂಡ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕಾಟಿಪಳ್ಳ ನಿವಾಸಿ ಶ್ರೀನಿವಾಸ (20), ರಾಜು (20) ಹಾಗೂ ಅಭಿಷೇಕ್ (18) ಎನ್ನಲಾಗಿದೆ. ಬಂಧಿತರಲ್ಲಿ ಕಾಟಿಪಳ್ಳ ಒಂದನೇ ಬ್ಲಾಕ್ ನ ನಿವಾಸಿಗಳಾದ ಶ್ರೀನಿವಾಸ ನ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ, ಇನ್ನೋರ್ವ ಆರೋಪಿ ರಾಜು ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನ, ಆಯುಧಗಳನ್ನು ವಶಪಡಿಕೊಳ್ಳಲಾಗಿದೆ.

ಘಟನೆಯಲ್ಲಿ ಬಸ್ ನಿರ್ವಾಹಕ ಜಾಬೀರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ : ಜನವರಿ 27ರಂದು ರಾತ್ರಿ ಸುಮಾರು 10;45 ರ ಹೊತ್ತಿಗೆ ಕಾಟಿಪಳ್ಳ ನಿವಾಸಿ ಜಾಬೀರ್ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಗಣೇಶ್ ಪುರ ದೇವಸ್ಥಾನದ ಬಳಿ ಇನ್ನೊಂದು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬೈಕ್ ಸವಾರ ಜಾಬೀರ್ ನನ್ನ ಅಡ್ಡಗಟ್ಟಿ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!