Friday, June 5, 2026
Homeಕರಾವಳಿತಾಕತ್ತಿದ್ದರೆ ಉಳ್ಳಾಲದ ಜನರು ಮುಸ್ಲಿಮೇತರರನ್ನು ಶಾಸಕರಾಗಿ ಮಾಡಿ: ಕಲ್ಲಡ್ಕ‌ ಪ್ರಭಾಕರ್ ಭಟ್

ತಾಕತ್ತಿದ್ದರೆ ಉಳ್ಳಾಲದ ಜನರು ಮುಸ್ಲಿಮೇತರರನ್ನು ಶಾಸಕರಾಗಿ ಮಾಡಿ: ಕಲ್ಲಡ್ಕ‌ ಪ್ರಭಾಕರ್ ಭಟ್

- Advertisement -
- Advertisement -

ಮಂಗಳೂರು: ಉಳ್ಳಾಲದ ಜನರಿಗೆ ತಾಕತ್ತಿದ್ದರೆ ಮುಂದಿನ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮೇತರರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಪಾಕಿಸ್ತಾನದಲ್ಲಿ ಮುಸ್ಲಿಮರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಇದೇ ಸ್ಥಿತಿ ನಮ್ಮ ಜಿಲ್ಲೆಯ ಉಳ್ಳಾಲದಲ್ಲಿ ಇದೆ ಎಂದು ಹೇಳಿದ್ದಾರೆ.

ಉಳ್ಳಾಲದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ದೇವಸ್ಥಾನ ಮತ್ತು ದೈವಸ್ಥಾನಗಳ ಹುಂಡಿಗೆ ಬೇಡದ ವಸ್ತುಗಳನ್ನು ಹಾಕುತ್ತಿದ್ದು ಇದರಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಕೆಲಸ ಸದಾ ನಡೆಯುತ್ತಿದೆ‌. ಇದರಿಂದಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!