Wednesday, June 3, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಇಂದು ಸಂಜೆ ನಟಿ ರಾಗಿಣಿ ಜೈಲಿನಿಂದ ರಿಲೀಸ್

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಇಂದು ಸಂಜೆ ನಟಿ ರಾಗಿಣಿ ಜೈಲಿನಿಂದ ರಿಲೀಸ್

- Advertisement -
- Advertisement -

ಬೆಂಗಳೂರು : ಸುಪ್ರೀಂ ಕೋರ್ಟ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿಗೆ ಜಾಮೀನು ಮಂಜೂರು ಮಾಡಿತ್ತು. ಇಂತಹ ಜಾಮೀನು ಆದೇಶ ಎನ್ ಡಿ ಪಿಎಸ್ ಕೋರ್ಟ್ ಗೆ ಶನಿವಾರ ನಟಿ ರಾಗಿಣಿ ಪರ ವಕೀಲರು ತಲುಪಿಸಿದ್ದರು. ಈ ಹಿನ್ನಲೆಯಲ್ಲಿ ಜೈಲಿನಿಂದ ಬಿಡುಗಡೆಗೆ ಎನ್ ಡಿ ಪಿಎಸ್ ಕೋರ್ಟ್ ಆದೇಶಿಸಿದೆ. ಹೀಗಾಗಿ ಇಂದು ಸಂಜೆ ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದಂತ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಹೀಗಾಗಿ 140 ದಿನಗಳ ಬಳಿಕ ನಟಿ ರಾಗಿಣಿ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂಬ ಸಂತಸದಲ್ಲಿದ್ದರು. ಆದ್ರೇ ಶ್ಯೂರಿಟಿ ಕೊಡೋದಕ್ಕೆ ಅವರ ಆಪ್ತರೇ ಮುಂದೆ ಬಾರದ ಕಾರಣಕ್ಕಾಗಿ ಮೂರು ದಿನ ತಡವಾಗಿತ್ತು.

ಕೊನೆಗೂ ಶನಿವಾರದಂದು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಎನ್ ಡಿ ಪಿಎಸ್ ಕೋರ್ಟ್ ಗೆ ನಟಿ ರಾಗಿಣಿ ಪರ ವಕೀಲರು ತಲುಪಿಸಿದ್ದರು. ಅಲ್ಲದೇ ಇಬ್ಬರ ಶ್ಯೂರಿಟಿ ಹಾಗೂ 3 ಲಕ್ಷ ಬಾಂಡ್ ಅನ್ನು ಕೋರ್ಟ್ ಗೆ ಸಲ್ಲಿಸಿದ್ದರು. ಈ ಎಲ್ಲವನ್ನು ಪರಿಶೀಲನೆ ನಡೆಸಿರುವಂತ ಎನ್ ಡಿ ಪಿಎಸ್ ಕೋರ್ಟ್ ನಟಿ ರಾಗಿಣಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಹೀಗಾಗಿ ಇಂದು ಸಂಜೆ ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!