- Advertisement -
![]()
- Advertisement -
ಬಂಟ್ವಾಳ: ವಿಟ್ಲ -ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ನಗದು ಸಹಿತ ಸೊತ್ತು ಕಳವುಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ಕಳ್ಳರು ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ಕಳವುಗೈದಿದ್ದಾರೆ ಎಂದು ಪೊಲೀಸ್ ರಿಗೆ ದೂರು ನೀಡಲಾಗಿದೆ.
ಕಳ್ಳರು ಕಚೇರಿಯ ಎಲ್ಲ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.
ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ ಎಸ್ಸಾರ್ ಕಂಪನಿಯ ಪೆಟ್ರೋಲ್ ಬಂಕ್ ಗೂ ಕಳ್ಳರು ನುಗ್ಗಿದ್ದರು.
- Advertisement -


