Friday, June 5, 2026
Homeಕರಾವಳಿಬೆಳ್ತಂಗಡಿಯಲ್ಲಿ ದೊಡ್ಡಪ್ಪನ ಮಗನಿಂದ ಬಾಲಕಿ ಮೇಲೆ ಅತ್ಯಾಚಾರ: ಗರ್ಭಿಣಿಯಾದ ಅಪ್ರಾಪ್ತೆ

ಬೆಳ್ತಂಗಡಿಯಲ್ಲಿ ದೊಡ್ಡಪ್ಪನ ಮಗನಿಂದ ಬಾಲಕಿ ಮೇಲೆ ಅತ್ಯಾಚಾರ: ಗರ್ಭಿಣಿಯಾದ ಅಪ್ರಾಪ್ತೆ

- Advertisement -
- Advertisement -

ಬೆಳ್ತಂಗಡಿ: 13 ವರ್ಷದ ಅಪ್ರಾಪ್ತ ಬಾಲಕಿಯನ್ನು ದೊಡ್ಡಪ್ಪನ ಮಗನೇ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಪುಂಡೈ ಬನ ಎಂಬಲ್ಲಿ ನಡೆದಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರವೀಣ್ ನನ್ನು ಪೊಲೀಸರು ಬಂಧಿಸಿ,  ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಪ್ರವೀಣ್ ಆಗಾಗ ಬಾಲಕಿ ಮನೆಗೆ ಬಂದು ಹೋಗುತ್ತಿದ್ದ.  ಆಗ ಪ್ರವೀಣ್ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ. ಜ.23ರಂದು ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದೆಗ ಆಕೆ 6 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಈ ಕುರಿತು ಬಾಲಕಿಯನ್ನು ವಿಚಾರಿಸಿದಾಗ ಸತ್ಯಾಂಶ ತಿಳಿದುಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!