Saturday, June 13, 2026
Homeಕರಾವಳಿಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಕಳ್ಳತನ ಪ್ರಕರಣ: ವಿಟ್ಲದಲ್ಲಿ ಪೆಟ್ರೋಲ್ ಬಂಕ್ ಗೆ ಕನ್ನ ಹಾಕಿದ ಖದೀಮರು...

ಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಕಳ್ಳತನ ಪ್ರಕರಣ: ವಿಟ್ಲದಲ್ಲಿ ಪೆಟ್ರೋಲ್ ಬಂಕ್ ಗೆ ಕನ್ನ ಹಾಕಿದ ಖದೀಮರು…

- Advertisement -
- Advertisement -

ಬಂಟ್ವಾಳ: ವಿಟ್ಲ -ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ನಗದು ಸಹಿತ ಸೊತ್ತು ಕಳವುಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ಕಳ್ಳರು ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ಕಳವುಗೈದಿದ್ದಾರೆ ಎಂದು ಪೊಲೀಸ್ ರಿಗೆ ದೂರು ನೀಡಲಾಗಿದೆ.

ಕಳ್ಳರು ಕಚೇರಿಯ ಎಲ್ಲ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ ಎಸ್ಸಾರ್ ಕಂಪನಿಯ ಪೆಟ್ರೋಲ್ ಬಂಕ್ ಗೂ ಕಳ್ಳರು ನುಗ್ಗಿದ್ದರು.

- Advertisement -

Latest News

error: Content is protected !!