Sunday, May 5, 2024
Homeಕರಾವಳಿ"ತೊಕ್ಕೊಟ್ಟಿನ ಈ ಪ್ರದೇಶಕ್ಕೆ ಮುಸ್ಲಿಮರಿಗೆ ಪ್ರವೇಶವಿಲ್ಲ"

“ತೊಕ್ಕೊಟ್ಟಿನ ಈ ಪ್ರದೇಶಕ್ಕೆ ಮುಸ್ಲಿಮರಿಗೆ ಪ್ರವೇಶವಿಲ್ಲ”

spot_img
- Advertisement -
- Advertisement -

ಮಂಗಳೂರು, ಎ. 6: ಉಳ್ಳಾಲ ಸಮೀಪದ ಸೋಮೇಶ್ವರ 2ನೆ ಕೊಲ್ಯ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕೋಮು ದ್ವೇಷ ಬಿತ್ತುವ ಭಿತ್ತಿಪತ್ರವು ನಿನ್ನೆ ತೆರವಾದ ಬೆನ್ನಲ್ಲೇ ಇಂದು ತೊಕ್ಕೊಟ್ಟು ಸಮೀಪದ ಕೃಷ್ಣನಗರದಲ್ಲಿ ಮತ್ತೊಂದು ಭಿತ್ತಿಪತ್ರ ಪ್ರತ್ಯಕ್ಷಗೊಂಡಿದೆ.

‘ಸೂಚನೆ….ಕೃಷ್ಣನಗರ ತೊಕ್ಕೊಟ್ಟು ನಾಗರಿಕರ ಹಿತದೃಷ್ಟಿಯಿಂದ ಕೊರೋನ ವೈರಸ್ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸಲ್ಮಾನ ವ್ಯಾಪಾರಿಗೆ ಪ್ರವೇಶವಿಲ್ಲ -ಹಿಂದೂ ಬಾಂಧವರು, ಕೃಷ್ಣ ನಗರ ತೊಕ್ಕೊಟ್ಟು’

ಎಂದು ಬರೆಯಲಾರದ ಭಿತ್ತಿಪತ್ರವೊಂದು ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್ ಮುಂದಿನ ಉಳ್ಳಾಲ-ಮೇಲಂಗಡಿ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಕಂಡು ಬಂದಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾ.ಹೆ 66ರ ಸೋಮೇಶ್ವರ ಸಮೀಪದ 2ನೆ ಕೊಲ್ಯ ಅಡ್ಡ ರಸ್ತೆಯುದ್ದಕ್ಕೂ ಇಂಥದ್ದೇ ಭಿತ್ತಿಪತ್ರವೊಂದು ಶನಿವಾರ ಕಂಡು ಬಂದಿತ್ತು. ರವಿವಾರ ಸಂಜೆ ವೇಳೆಗೆ ಅದು ತೆರವಾಗಿತ್ತು. ಇದೀಗ ತೊಕ್ಕೊಟ್ಟು ಕೃಷ್ಣನಗರದಲ್ಲಿ ಇಂಥದ್ದೇ ಭಿತ್ತಿಪತ್ರ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

- Advertisement -
spot_img

Latest News

error: Content is protected !!