Saturday, August 20, 2022
Homeತಾಜಾ ಸುದ್ದಿಎಪ್ರಿಲ್ 17ರಂದೇ ನಡೆಯಲಿದೆ ನಿಖಿಲ್- ರೇವತಿ ಮದುವೆ

ಎಪ್ರಿಲ್ 17ರಂದೇ ನಡೆಯಲಿದೆ ನಿಖಿಲ್- ರೇವತಿ ಮದುವೆ

- Advertisement -
- Advertisement -

ರಾಮನಗರ -ಚನ್ನಪಟ್ಟಣದ ಜಾನಪದ ಲೋಕದ ಬಳಿ ಅದ್ದೂರಿಯಾಗಿ ನೆರವೇರಬೇಕಿದ್ದ ನಟ ನಿಖಿಲ್ ಕುಮಾರಸ್ವಾಮಿ -ರೇವತಿ ಅವರ ವಿವಾಹ ಲಾಕ್ ಡೌನ್ ಕಾರಣದಿಂದಾಗಿ ಸರಳವಾಗಿ ನೆರವೇರಲಿದೆ.

ಕೋರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ನಿಖಿಲ್ ಕುಮಾರಸ್ವಾಮಿ ಮದುವೆ ಮುಂದೂಡಬಹುದು ಎಂದು ಹೇಳಲಾಗಿತ್ತು. ಆದರೆ ಈ ಕುರಿತ ಗೊಂದಲಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಪೂರ್ವನಿಗದಿಯಂತೆ ಮನೆ ಆವರಣದಲ್ಲಿ ನಿಖಿಲ್ ಕುಮಾರ್ ಮತ್ತು ರೇವತಿ ಅವರ ಮದುವೆ ನಡೆಯಲಿದೆ. ಲಾಕ್ಡೌನ್ ಇರುವುದರಿಂದ ಜನರ ನಡುವೆ ಮದುವೆ ಮಾಡಲು ಆಗುವುದಿಲ್ಲ. ಎರಡು ಕುಟುಂಬ ಸದಸ್ಯರು ಮಾತ್ರ ಸೇರಿ ಮದುವೆ ಶಾಸ್ತ್ರ ಮುಗಿಸಲಾಗುವುದು. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ರಾಮನಗರದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಕುಮಾರಸ್ವಾಮಿ ನೀಡಿದ್ದಾರೆ. ಅದ್ಧೂರಿಯಾಗಿ ಮದುವೆ ನೆರವೇರಿಸಲು ಜಾನಪದ ಲೋಕದ ಬಳಿ ಸೆಟ್ ಹಾಕಲಾಗಿತ್ತು. ಬಳಿಕ ಮದುವೆಯನ್ನು ಬೆಂಗಳೂರು ಅರಮನೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎನ್ನಲಾಗಿತ್ತು. ಕೊರೋನಾ ಬಿಕ್ಕಟ್ಟಿನ ಕಾರಣದಿಂದ ನಿಗದಿತ ದಿನದಂದು ಮನೆಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.

- Advertisement -
- Advertisment -

Latest News

error: Content is protected !!