- Advertisement -
- Advertisement -
ಜೈಪುರ:ಬೆಂಗಳೂರಿನ ಹೆಸರಾಂತ ಬೈಕ್ ಸಾಹಸಿ ಕಿಂಗ್ ರಿಚರ್ಡ್ ಶ್ರೀನಿವಾಸನ್ ಅವರು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಒಂಟೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.ಬುಧವಾರ ರಾತ್ರಿ ಫತೇಗಢ ಉಪ ವಿಭಾಗದ ವ್ಯಾಪ್ತಿಯ ರಸ್ತೆಯ ಮೂಲಕ ಜೈಸಲ್ಮೇರ್‌ನತ್ತ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.ರಿಚರ್ಡ್ ಅವರು ಮೂವರು ಸ್ನೇಹಿತರೊಂದಿಗೆ ತೆರಳಿದ್ದರು.
ರಿಚರ್ಡ್ ಅವರು ಚಲಾಯಿಸುತ್ತಿದ್ದ ಬೈಕ್ ಗೆ ಒಂಟೆಯೊಂದು ಏಕಾಏಕಿ ಅಡ್ಡಬಂದಾಗ ಬೈಕ್ ಅದಕ್ಕೆ ಗುದ್ದಿದೆ. ಘಟನೆಯಲ್ಲಿ ರಿಚರ್ಡ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಅವರು ಕೊನೆಯುಸಿರೆಳೆದಿದ್ದರು. ಈ ಸಾಹಸಿ ಹಿಂದೆ ಟೈಗರ್-800 ಬೈಕ್‌ನಲ್ಲಿ ಬೆಂಗಳೂರಿನಿಂದ ಹೊರಟು ಏಷ್ಯಾ, ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾದ ವಿವಿಧ ಪ್ರದೇಶಗಳನ್ನು ಸುತ್ತಿ ಬಂದಿದ್ದರು ಎನ್ನಲಾಗಿದೆ.
- Advertisement -