Wednesday, June 3, 2026
Homeಕ್ರೀಡೆಅನುಷ್ಕಾ ಹಾಗೂ ವಿರಾಟ್ ಮಗುವಿನ ಫೋಟೋ ವೈರಲ್

ಅನುಷ್ಕಾ ಹಾಗೂ ವಿರಾಟ್ ಮಗುವಿನ ಫೋಟೋ ವೈರಲ್

- Advertisement -
- Advertisement -

ಮುಂಬೈ: ನಿನ್ನೆಯಷ್ಟೇ ಬಾಲಿವುಡ್ ನಟಿ ಅನುಷ್ಕಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ದಂಪತಿ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಮಗು ಹೇಗಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ  ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಮಗುವುನ ಫೋಟೋ ವೈರಲ್ ಆಗಿದೆ.

ವಿರಾಟ್​-ಅನುಷ್ಕಾರ ಜೀವದ ಕುಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿರಾಟ್​ ಕೊಹ್ಲಿಯ ಸಹೋದರ ವಿಕಾಸ್​ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಮಗುವಿನ ಪಾದಗಳು ಕಾಣುತ್ತಿರುವ ಕ್ಯೂಟ್​ ಫೋಟೋ ಜೊತೆಗೆ ಮಗುವನ್ನು ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ವಿರಾಟ್​ ಹಾಗೂ ಅನುಷ್ಕಾರ ಮಗುವಿನ ಈ ಮೊದಲ ಚಿತ್ರ ಈಗ ಇನ್​ಸ್ಟಾಗ್ರಾಂ ಸೇರಿದಂಥೆ ಸಾಮಾಜಿಕ ಜಾಲತಾಣದ ಇತರೆ ಖಾತೆಗಳಲ್ಲಿ ಹರಿದಾಡುತ್ತಿದೆ.

ಕಳೆದವಾರವಷ್ಟೇ ತುಂಬು ಗರ್ಭಿಣಿಯಾಗಿದ್ದ ನಟಿ ಅನುಷ್ಕಾ ವೋಗ್​ ಇಂಡಿಯಾ​ಗಾಗಿ ಕ್ಯಾಮೆರಾಗೆ ಫೋಸ್​ ಕೊಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅಲ್ಲದೇ, ಬಸಿರ ಬಯಕೆಯಂತೆ ತಮ್ಮಿಷ್ಟದ ಆಹಾರವನ್ನು ಕೂಡ ತಿನ್ನುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

- Advertisement -

Latest News

error: Content is protected !!