ಮೇಷ
ಇಂದಿನ ದಿನ ಶುಭ ಫಲ ಇರುವುದರಿಂದ ದುಷ್ಪರಿಣಾಮ ಇಲ್ಲ. ವಾಹನ ಹತೋಟಿಯೂ ಅಗತ್ಯ. ಎಚ್ಚರವಾಗಿದ್ದಲ್ಲಿ ಎಲ್ಲಾ ಸುಖವನ್ನು ಪಡೆಯಬಹುದು.ಖರ್ಚು ನಿಮ್ಮನ್ನು ಮುಳುಗಿಸಬಹುದು
ವೃಷಭ
ಶನಿ-ರವಿ ಸಂಘರ್ಷದಿಂದ ಮನಸ್ಸಿಗೆ ಖೇದ ಉಂಟಾಗುವುದು. ಮೌನವು ನಿಮಗೆ ಲಾಭ ತರುತ್ತದೆ. ಆರೋಗ್ಯದಲ್ಲಿ ಎಚ್ಚರ.
ಮಿಥುನ
ನಿಮ್ಮ ಸಮಯ ಈಗ ಸ್ವಲ್ಪ ಸುಧಾರಿಸುತ್ತಿದೆ. ದುಡುಕು ಬೇಡ. ದುಶ್ಚಿಂತನೆ ಬಿಟ್ಟು ಕಾರ್ಯಗಳಿಗೆ ಕೈ ಹಾಕಿದಲ್ಲಿ ಎಲ್ಲಾ ವಿಚಾರದಲ್ಲೂ ಅನುಕೂಲವಾಗುತ್ತದೆ.
ಕಟಕ
ಮಾತೆಂಬ ಮುತ್ತು ಮೃತ್ಯುವಾಗದಿರಲಿ ಚಂದ್ರಾಷ್ಟೋತ್ತರ, ಚತುರ್ಭಜ ಬ್ರಹ್ಮನ ಧ್ಯಾನಶ್ಲೋಕ ಪಠಿಸಿ. ದಾನ ಧರ್ಮಗಳಲ್ಲಿ ನಂಬಿಕೆ ನಿಮಗೆ ಬೇಕು.
ಸಿಂಹ
ನಿಮಗೆ ಶನಿಯು ಬಹಳಷ್ಟು ಧನ-ಧೈರ್ಯ, ಜೀವನೋಪಾಯ ಒದಗಿಸುವನು ಶುಭವೇ ನಿಮ್ಮ ಕೈಯಲ್ಲಿದೆ. ಗರ್ವದಿಂದ ದೂರವಿರಿ. ವಾಹನ ಖರೀದಿ ಸಾಧ್ಯತೆ.
ಕನ್ಯಾ
ಅವಶ್ಯವಾಗಿ ಶನಿ ಉಪಾಸನೆಯನ್ನು ಮಾಡಲೇಬೇಕು. ಗುರುವಿನ ಅನುಗ್ರಹ ಪಡೆಯಲೇಬೇಕು. ಇತರರ ಮಾತು ಕೇಳುವುದು ಅವಶ್ಯಕ.
ತುಲಾ
ಸಮಯ ಉತ್ತಮ ವಾಗಿರಲಿದೆ.ಆಂಜನೇಯ ಅಷ್ಟಕವನ್ನು ಪಠಿಸಿ. ಧನ ಪೋಲು ಮಾಡದೇ ಎಚ್ಚರ ವಹಿಸಿ.
ವೃಶ್ಚಿಕ
ನಿಮ್ಮ ಸಮಯ ಚನ್ನಾಗಿದೆ. ದತ್ತಾತ್ರೇಯ ಸಹಸ್ರನಾಮ ಮಾಡಿರಿ. ಹೊಸ ಕೆಲಸಕ್ಕೆ ಮುನ್ನ ತಾಯಿಯ ಅನುಮತಿ ಪಡೆಯಿರಿ. ದೇವರ ದಯೆ ಇರುತ್ತದೆ.
ಧನು
ಶನಿಯ ಉಪಟಳ ವಿದ್ದಾರೂ ನಿಧಾನವಾದರೂ ಸಂದರ್ಭ ಬಂದಾಗ ಹೇಗೆ ನಡೆಯಬೇಕೆಂಬ ಪಾಠವನ್ನು ಕಲಿಸಿ, ನಿಮಗೆ ಸಂತೋಷ, ಧನ, ಕೀರ್ತಿಯನ್ನು ತರುತ್ತಾನೆ.ಅಹಂಕಾರ ಬೇಡ.
ಮಕರ
ವ್ಯವಹಾರದಲ್ಲಿ ಹಿನ್ನಡೆ ಯಯಾಗಲಿದೆ. ಶನಿಯು ಜನ್ಮ ದ್ವಾದಶದಲ್ಲೂ ಇರುವ ಕಾರಣ ಜಾಗರೂಕ ರಾಗಿರಿ.ಸೂರ್ಯಾಷ್ಟಕವನ್ನು ಪಾರಾಯಣ ಮಾಡಿ, ದಾನ ಧರ್ಮಗಳಲ್ಲಿ ತೊಡಗಿ.
ಕುಂಭ
ಶನಿಕಾಟ ವಿದ್ದರೂ ಭಾಗ್ವಮ್ತನಲ್ಲಿ ನಂಬಿಕೆ ಇರಿಸಿ. ಹೊಸ ಕಾಮಗಾರಿ, ಮನೆ ಕಟ್ಟುವುದು ಸಧ್ಯಕ್ಕೆ ಬೇಡ. ಖರ್ಚು ವೆಚ್ಚದಿಂದ ದೂರವಿರಿ. ಮನೆಯವರ ಕುರಿತು ಕಾಳಜಿ ಇರಲಿ.
ಮೀನ
ಆಸೆ-ಆಮಿಷಗಳಿಗೆ ಈ ದಿನ ಬಲಿಯಾಗಬೇಡಿ ನಿಮ್ಮ ಜೀವನ ಸುಖಮಯವಾಗುವುದು ಖಂಡಿತ. ಗುರು, ರವಿ, ಬುಧ, ಸ್ವಕ್ಷೇತ್ರ ಶನಿಯಿಂದ ನಿಮಗೆ ಧನಲಾಭ ವಾಗುತ್ತದೆ. ತಾಯಿಯಲ್ಲಿ ಮಮತೆ ಇರಲಿ.