Sunday, August 30, 2026
Homeತಾಜಾ ಸುದ್ದಿಜೊತೆಜೊತೆಯಲಿ ಧಾರಾವಾಹಿಗೆ ವಿಜಯ್ ಸೂರ್ಯ ಹಾಗೂ ಸುಧಾರಾಣಿ ಎಂಟ್ರಿ:ಅನು ಯಾರನ್ನು ವಿವಾಹವಾಗ್ತಾಳೆ ಗೊತ್ತಾ?

ಜೊತೆಜೊತೆಯಲಿ ಧಾರಾವಾಹಿಗೆ ವಿಜಯ್ ಸೂರ್ಯ ಹಾಗೂ ಸುಧಾರಾಣಿ ಎಂಟ್ರಿ:ಅನು ಯಾರನ್ನು ವಿವಾಹವಾಗ್ತಾಳೆ ಗೊತ್ತಾ?

- Advertisement -
- Advertisement -

ಬೆಂಗಳೂರು :ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಜೊತೆ ಜೊತೆಯಲಿ’ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ದಾಖಲೆ ಯಶಸ್ಸು ಪಡೆದ ಧಾರಾವಾಹಿಗೆ ಖ್ಯಾತ ನಟಿ ಸುಧಾರಾಣಿ ಹಾಗೂ ನಟ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ಅನು ಜೀವನದಲ್ಲಿ ವಿಜಯ್ ಸೂರ್ಯ ಪ್ರವೇಶ ಪಡೆದಿದ್ದಾರೆ. ಆತ ಫಾರಿನ್ ರಿಟರ್ನ್ಡ್. ಆತನ ಅಮ್ಮ ಸುಧಾರಾಣಿ. ಆಕೆ ನಿವೃತ್ತ ಶಿಕ್ಷಕಿ. ಶಸ್ತ್ರಚಿಕಿತ್ಸೆಯಾದ ತಾಯಿಯ ಆರೈಕೆ ಮಾಡಲೆಂದು ವಿಜಯ್ ಸೂರ್ಯ ವಿದೇಶದಿಂದ ಬರುತ್ತಾರೆ. ಹೇಳದೆ ಬರುತ್ತಾರೆ. ವಿದೇಶದಿಂದ ಬಂದ ವಿಜಯ್ ಸೂರ್ಯ ಸುಬ್ಬುವಿನ ಅಂಗಡಿಗೆ ಸೀರೆ ಕೊಳ್ಳಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಸುಬ್ಬು ಪ್ರಜ್ಞೆ ತಪ್ಪುತ್ತಾನೆ. ಅವನಿಗೆ ಸೂರ್ಯ ನೆರವಾಗುತ್ತಾರೆ. ಅಲ್ಲಿಂದ ಅವರಿಬ್ಬರ ವಿಶೇಷ ಸ್ನೇಹ ಪ್ರಾರಂಭವಾಗುತ್ತದೆ.

ಸೂರ್ಯನ ತಾಯಿ ಸುಧಾರಾಣಿ ಹೆಸರೂ ಅನುರಾಧ. ಅದೂ ಕೂಡಾ ವಿಶೇಷವಾದ ಬಾಂಧವ್ಯ ಬೆಳೆಸುತ್ತದೆ. ಸುಬ್ಬುವಿಗೆ ಸೂರ್ಯನನ್ನು ನೋಡಿದಾಗಲೆಲ್ಲ ತನ್ನ ಮಗಳಿಗೆ ಒಳ್ಳೆಯ ವರ ಎನ್ನಿಸಲು ಪ್ರಾರಂಭವಾಗುತ್ತದೆ. ಇನ್ನೊಂದು ಕಡೆ ಆರ್ಯವರ್ಧನ್, ಸೂರ್ಯನನ್ನು ಭೇಟಿಯಾಗುತ್ತಾರೆ. ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಹೀಗಾಗಿ ಅನು ಯಾರನ್ನು ವಿವಾಹವಾಗುತ್ತಾಳೆ ಅನ್ನೋದು ಕುತೂಹಲ ಮೂಡಿಸಿದೆ.

- Advertisement -

Latest News

error: Content is protected !!