Wednesday, June 3, 2026
Homeಕರಾವಳಿಚುನಾವಣೆ ಬಹಿಷ್ಕರಿಸಿದ ಬಾಳಿಲ ಗ್ರಾಮ ಪಂಚಾಯತ್ ನ 2ನೇ ವಾರ್ಡ್ ನ ಜನ

ಚುನಾವಣೆ ಬಹಿಷ್ಕರಿಸಿದ ಬಾಳಿಲ ಗ್ರಾಮ ಪಂಚಾಯತ್ ನ 2ನೇ ವಾರ್ಡ್ ನ ಜನ

- Advertisement -
- Advertisement -

ಬೆಳ್ಳಾರೆ : ರಾಜ್ಯದಲ್ಲಿ ಗ್ರಮ ಪಂಚಾಯತ್ ಚುನಾವಣೆಯ ಅಖಾಡ ರಂಗೇರುತ್ತಿದೆ. ಎಲ್ಲೆಡೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಕೆಲವಡೆ ಚುನಾವಣಾ ಬಹಿಷ್ಕಾರದ ಸದ್ದು ಕೂಡ ಜೋರಾಗಿದೆ.

 ಹೀಗಿರುವಾಗಲೇ ಸುಳ್ಯ ತಾಲೂಕಿನ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಚುನಾವಣಾ ಬಹಿಷ್ಕಾರ ಬ್ಯಾನರ್ ಆಳವಡಿಸುವ ಮೂಲಕ ಜನ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಬಾಳಿಲ 2ನೇ ವಾರ್ಡ್ ನಲ್ಲಿ ಕೆಲವೊಂದು ಬೇಡಿಕೆಗಳು ಈಡೇರಿಲ್ಲ. ಪ್ರಮುಖ ಬೇಡಿಕೆಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ದಾರಿದೀಪ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸದೆ ಜನಪ್ರತಿನಿಧಿಗಳು ಕೇವಲ ಭರವಸೆ ಮಾತ್ರ ನೀಡುತ್ತಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳ ಧೋರಣೆಗೆ ಬೇಸತ್ತು ಮುಂದಿನ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕೊಡೆಂಕಿರಿ,ಮರೆಂಗಾಲ, ಪಲ್ಲತ್ತಡ್ಕ ಮತ್ತು ಕಾಪುತ್ತಡ್ಕ ಗ್ರಾಮಸ್ಥರು ಬ್ಯಾನರ್ ಅಳವಡಿಸಿದ್ದಾರೆ.

- Advertisement -

Latest News

error: Content is protected !!