Saturday, June 6, 2026
Homeತಾಜಾ ಸುದ್ದಿ“ದ ಡರ್ಟಿ ಪಿಕ್ಚರ್" ಖ್ಯಾತಿಯ ನಟಿ ಶವವಾಗಿ ಪತ್ತೆ

“ದ ಡರ್ಟಿ ಪಿಕ್ಚರ್” ಖ್ಯಾತಿಯ ನಟಿ ಶವವಾಗಿ ಪತ್ತೆ

- Advertisement -
- Advertisement -

ನವದೆಹಲಿ:“ದ ಡರ್ಟಿ ಪಿಕ್ಚರ್” ಸೇರಿದಂತೆ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ದಕ್ಷಿಣ ಕೋಲ್ಕತಾದ ನಿವಾಸದಲ್ಲಿ ನಿನ್ನೆ ಶವವಾಗಿ ಪತ್ತೆಯಾಗಿದ್ದಾರೆ.

3ನೇ ಮಹಡಿಯ ಅಪಾರ್ಟ್ ಮೆಂಟ್ ನಲ್ಲಿರುವ  ನಟಿ ಆರ್ಯ ಮನೆಯ ಬಾಗಿಲನ್ನು ಒಡೆದು ಪೊಲೀಸರು ಒಳ ಹೋದಾಗ ಸಂದರ್ಭದಲ್ಲಿ 33 ವರ್ಷದ ನಟಿಯ ಶವ ಬೆಡ್ ರೂಂನಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

ಸೀತಾರ್ ವಾದಕ ದಿ.ನಿಖಿಲ್ ಬಂಡೋಪಾಧ್ಯಾಯ ಅವರ ಪುತ್ರಿಯಾಗಿರುವ ಆರ್ಯ ಬ್ಯಾನರ್ಜಿ, 2010ರಲ್ಲಿ ಬಿಡುಗಡೆಯಾದ ಲವ್, ಸೆಕ್ಸ್ ಔರ್ ದೋಕಾ, ದ ಡರ್ಟಿ ಪಿಚ್ಚರ್ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ ಮುಂಬೈನಲ್ಲಿ ರೂಪದರ್ಶಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.

- Advertisement -

Latest News

error: Content is protected !!