Sunday, April 28, 2024
Homeತಾಜಾ ಸುದ್ದಿಬೇಲಿಯೇ ಎದ್ದು ಹೊಲ ಮೇದ ಕಥೆ!..ಸಿಬಿಐ ವಿರುದ್ಧವೇ ಕಳ್ಳತನದ ಆರೋಪ

ಬೇಲಿಯೇ ಎದ್ದು ಹೊಲ ಮೇದ ಕಥೆ!..ಸಿಬಿಐ ವಿರುದ್ಧವೇ ಕಳ್ಳತನದ ಆರೋಪ

spot_img
- Advertisement -
- Advertisement -

ಚೆನ್ನೈ:2012 ರಲ್ಲಿ ಖಾಸಗಿ ಆಮದುದಾರರಿಂದ ಸಿಬಿಐ ವಶಕ್ಕೆ ಪಡೆದಿದ್ದ 400 ಕೆ.ಜಿಯಷ್ಟು ಚಿನ್ನವನ್ನು ಸುರಕ್ಷಿತವಾಗಿ ಇರಿಸಲಾಗಿತ್ತು. ಆದರೆ ಈಗ ಚಿನ್ನವನ್ನುಇರಿಸಲಾಗಿದ್ದ ನೆಲಮಾಳಿಗೆಯನ್ನು ತೆರೆದಾಗ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನದ ಗಟ್ಟಿ, ಆಭರಣಗಳು ಮಾಯವಾಗಿದೆ. ಈ ಸಂಬಂಧ ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ.

ಚಿನ್ನದ ಪ್ರಮಾಣ ಕಡಿಮೆಯಾಗಿರುವುದಕ್ಕೆ ಸಿಬಿಐ ಸಮರ್ಥನೆ ನೀಡಿದೆ. ಲನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ನ ಲಿಕ್ವಿಡೇಟರ್ ಗೆ ಹಸ್ತಾಂತರಿಸುವಾಗ ಪ್ರತ್ಯೇಕವಾಗಿ ತೂಕ ಮಾಡಲಾಗಿದ್ದು, ಆ ಕಾರಣ ಚಿನ್ನದ ಪ್ರಮಾಣ 296 ಕೆ.ಜಿಯಷ್ಟೇ ಪತ್ತೆಯಾಗಿದೆ ಎಂದು ಅದು ಹೇಳಿದೆ. ಆದರೆ ಸಿಬಿಐ ತನ್ನ ತನಿಖೆ ಸಂಸ್ಥೆಯ ಘನತೆಗೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಮುಂದೆ ಹೇಳಿತ್ತು ಆದರೆ ಕೋರ್ಟ್ ಕಾನೂನಿನಲ್ಲಿ ಈ ರೀತಿಯ ವಿನಾಯ್ತಿಗೆ ಅವಕಾಶವಿಲ್ಲ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದೆ.

- Advertisement -
spot_img

Latest News

error: Content is protected !!