Sunday, June 7, 2026
Homeತಾಜಾ ಸುದ್ದಿತನ್ನ ಮದುವೆ ದಿನವೇ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಯುವಕ

ತನ್ನ ಮದುವೆ ದಿನವೇ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಯುವಕ

- Advertisement -
- Advertisement -

ಧಾರವಾಡ: ತನ್ನ ಮದುವೆ ದಿನವೇ ಯುವಕನೊಬ್ಬ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಚ್ಚರಿಯ ಘಟನೆ ಧಾರವಾಡ ಜಿಲ್ಲೆಯ ಯತ್ತಿನಗುಡ್ಡ ಗ್ರಾಮದ ಜ್ಯೋತಿ ಜತೆ ಸೊರಟೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುತ್ತು ಅಲಿಯಾಸ್ ಪರಶುರಾಮ್ ಮಲ್ಲಾರಿ ಮದುವೆ ವರನ ಸ್ವಗೃಹದಲ್ಲಿ ನಿಶ್ಚಯವಾಗಿತ್ತು. ರಾಜಕೀಯದಲ್ಲೂ ಆಸಕ್ತಿ ಹೊಂದಿರುವ ಮುತ್ತು ಮಲ್ಲಾರಿ ತನ್ನ ಮದುವೆ ದಿನವೇ ಗ್ರಾಮದ 3ನೇ ವಾರ್ಡ್‌ನ ಸಾಮಾನ್ಯನಮೀಸಲಾತಿ ಕ್ಷೇತ್ರಕ್ಕೆ ಆಯ್ಕೆ ಬಯಸಿ ವರನ ವಸ್ತ್ರಾಲಂಕಾರದಲ್ಲಿಯೇ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಮದುಮಗ ಮುತ್ತು ಮಲ್ಲಾರಿ, ಹಿರಿಯರು ನಿಶ್ಚಯಿಸಿದಂತೆ ನಮ್ಮ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತಿದ್ದು, ಈ ಶುಭ ಗಳಿಗೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದೇ ದಿನ ನಾಮಪತ್ರ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದಾಗ ಹಿರಿಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಹಾಗೂ ಮದುವೆ ಕಾರ್ಯ ನಡೆಯುತ್ತಿರುವುದು ಉತ್ಸಾಹ ತುಂಬಿದೆ ಎಂದ್ರು.

- Advertisement -

Latest News

error: Content is protected !!