Sunday, June 7, 2026
Homeತಾಜಾ ಸುದ್ದಿಮದುವೆ ಮೊದಲ ದಿನ ಎಸ್ಕೇಪ್ ಆದ ವರ: ವಿವಾಹದ ದಿನ ಬಂದು ಕೊಟ್ಟ ಎಲ್ಲರಿಗೂ ಶಾಕ್

ಮದುವೆ ಮೊದಲ ದಿನ ಎಸ್ಕೇಪ್ ಆದ ವರ: ವಿವಾಹದ ದಿನ ಬಂದು ಕೊಟ್ಟ ಎಲ್ಲರಿಗೂ ಶಾಕ್

- Advertisement -
- Advertisement -

ಮೈಸೂರು : ಅಲ್ಲಿ ಮದುವೆಯ ಸಂಭ್ರಮ, ಹೊಸ ಬಾಳಿಗೆ ಅಡಿ ಇಡಬೇಕಾಗಿದ್ದ ವಧು ನೂರಾರು ಕನಸು ಕಂಡು ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಆದರೆ ಅಲ್ಲಿ ಆಗಿದ್ದೇ ಬೇರೆ. ವಧುವಿಗೆ ಕೈಕೊಟ್ಟು ಪ್ರೇಯಸಿಯೊಂದಿಗೆ ವರ ಪರಾರಿಯಾಗಿರುವ ಘಟನೆ ಮೈಸೂರು ನಗರದ ಕೆ.ಆರ್. ಮೊಹಲ್ಲಾದಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿಯ ಉಮೇಶ್ ಪರಾರಿಯಾದ ವರ. ಇಂದು ಸಿಂಚನ  ಹಾಗೂ ಉಮೇಶ್ ಮದುವೆ ನಡೆಯಬೇಕಿತ್ತು. ಆದರೆ ನಿನ್ನೆ ಉಮೇಶ್‌ ತನ್ನ ಲವರ್‌ ಜೊತೆಗೆ ಓಡಿ ಹೋಗಿದ್ದಾನೆ. ಇದರಿಂದ ನಿನ್ನೆ ನಡೆಯಬೇಕಾಗಿದ್ದ ಆರತಕ್ಷತೆ ರದ್ದಾಗಿತ್ತು.

ಇನ್ನು ಇಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತನ್ನ ಪ್ರೇಯಸಿ ಜೊತೆ ಪ್ರತ್ಯಕ್ಷವಾಗಿದ್ದಾನೆ. ಅಲ್ಲೇ ಆಕೆಯನ್ನು ವಿವಾಹವಾಗಿರೋದಾಗಿ ಹೇಳಿದ್ದಾನೆ. ಸದ್ಯ ವರ ಉಮೇಶ್ ಕುಟುಂಬಸ್ಥರು ವಧು ಕುಟುಂಬಕ್ಕೆ 5 ಲಕ್ಷ ಹಣ ಕೊಡುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.  

- Advertisement -

Latest News

error: Content is protected !!