Saturday, June 6, 2026
Homeತಾಜಾ ಸುದ್ದಿದುಡ್ಡಿಗಾಗಿ ತನ್ನನ್ನೇ ಕಿಡ್ನ್ಯಾಪ್ ಮಾಡಿಸಿ ತಂದೆಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ಯುವಕ

ದುಡ್ಡಿಗಾಗಿ ತನ್ನನ್ನೇ ಕಿಡ್ನ್ಯಾಪ್ ಮಾಡಿಸಿ ತಂದೆಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ಯುವಕ

- Advertisement -
- Advertisement -

ಜೈಪುರ: ತನ್ನನ್ನೇ ಹಣಕ್ಕಾಗಿ ಅಪಹರಣ ಮಾಡಿಸಿ ಕೊನೆಗೆ ಯುವಕನೊಬ್ಬ ಸಿಕ್ಕಿ ಬಿದ್ದ ಘಟನೆಯೊಂದು ನಡೆದಿದೆ.

ವಿಕಾಸ್ ತನ್ನ ಕಿಡ್ನ್ಯಾಪ್ ಗೆ ಪ್ಲಾನ್ ಮಾಡಿದ್ದ ಯುವಕ. ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೇಕಡಾ ಗ್ರಾಮದ ನಿವಾಸಿಯಾಗಿದ್ದ ವಿಕಾಸ್ ಕ್ರೆಡಿಟ್ ಕಾರ್ಡ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದನು. ಹಣಕ್ಕಾಗಿ ತನ್ನ ಅಪಹರಣ ಮಾಡುವಂತೆ ಗೆಳೆಯರಾದ ಯಾದರಾಮ್ ಮತ್ತು ಲೋಕೇಂದ್ರ ಸಿಂಗ್ ಗೆ ಹೇಳಿದ್ದನು. ವಿಕಾಸ್ ಸಲಹೆಯಂತೆ ಇಬ್ಬರು ಗೆಳೆಯರು ಸಿನಿಮಾ ಶೈಲಿಯಲ್ಲಿ ಆತನನ್ನು ಕುರ್ಚಿಗೆ ಕಟ್ಟಿ ಹಾಕಿ ಥಳಿಸುತ್ತಿರುವ ವೀಡಿಯೋ ಮಾಡಿದ್ದರು. ನಂತರ ಆ ವೀಡಿಯೋವನ್ನ ವಿಕಾಸ್ ತಂದೆ ಪ್ರೇಮ್ ಸಿಂಗ್ ಮೊಬೈಲ್ ಗೆ ಕಳುಹಿಸಿ, ಎರಡೂವರೆ ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು.

ವೀಡಿಯೋ ನೋಡಿದ ಪ್ರೇಮ್ ಸಿಂಗ್ ಆತಂಕಕ್ಕೊಳಗಾಗಿ ಮಗನ ಉಳಿಸಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದಾರೆ. ಅಖಾಡಕ್ಕಿಳಿದ ಪೊಲೀಸರು ಕೆಲವೇ ಗಂಟೆಯಲ್ಲಿ ವಿಕಾಸ್ ಮತ್ತು ಆತನ ಇಬ್ಬರು ಗೆಳೆಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!