Thursday, May 16, 2024
Homeಕರಾವಳಿಮಂಗಳೂರು: ಸಿಟಿ ಬಸ್ ನಲ್ಲಿ ಮದುವೆ ಟ್ರಿಪ್! ಬಸ್ ನ ವಿರುದ್ದ ಕೋರ್ಟ್ ಕೇಸು ದಾಖಲು

ಮಂಗಳೂರು: ಸಿಟಿ ಬಸ್ ನಲ್ಲಿ ಮದುವೆ ಟ್ರಿಪ್! ಬಸ್ ನ ವಿರುದ್ದ ಕೋರ್ಟ್ ಕೇಸು ದಾಖಲು

spot_img
- Advertisement -
- Advertisement -

ಉಳ್ಳಾಲ: ಕಾನೂನಿಗೆ ವಿರುದ್ದವಾಗಿ ಸರ್ವೀಸ್ ಬಸ್ ನಲ್ಲಿ ಮದುವೆ ಟ್ರಿಪ್ ನಡೆಸುತ್ತಿದ್ದ ಆರೋಪದ ಮೇಲೆ ಬಸ್ ನ ವಿರುದ್ದ ಕೋರ್ಟ್ ಕೇಸು ದಾಖಲಾದ ಘಟನೆ ಇಂದು ನಡೆದಿದೆ.

ಮಂಗಳೂರಿನ ಸ್ಟೇಟ್ ಬ್ಯಾಂಕ್ – ಚೇಳ್ಯಾರ್ ಪದವು ನಡುವೆ ಪ್ರಯಾಣಿಕರನ್ನು ಸಾಗಿಸಬೇಕಾಗಿದ್ದ ಬಸ್ ಉಳ್ಳಾಲ ವ್ಯಾಪ್ತಿಯಿಂದ ಮಂಗಳೂರು ಕಡೆ ರೂಟ್ ಟ್ರಿಪ್ ಬದಲಿಸಿ ಮದುವೆಗೆ ಜನರನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಕೂಡಲೇ ತೊಕ್ಕೊಟು ಜಂಕ್ಷನ್ ನಲ್ಲಿ ದ.ಕ.ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಬಸ್ ಅಸೋಸಿಯೇಷನ್ ನ ಚಾಲಕರು ಮತ್ತು ಮಾಲಕರು ‌ಬಸ್ ಗೆ ತಡೆ ಒಡ್ಡಿದ್ದು, ನಂತರ ಸ್ಧಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಪೊಲೀಸ್ ರನ್ನು ಸ್ಥಳಕ್ಕೆ ಕರೆಸಿ ಬಸ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಬಸ್ಸಿನ ವಿರುದ್ದ ಪರ್ಮೀಟ್ ದುರ್ಬಳಕೆ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!