Friday, June 5, 2026
HomeUncategorizedಅದ್ಧೂರಿ ಮದುವೆಗೆ ಸಾಕ್ಷಿಯಾದ ಬೆಂಗಳೂರು: ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದ ಮದುಮಗ

ಅದ್ಧೂರಿ ಮದುವೆಗೆ ಸಾಕ್ಷಿಯಾದ ಬೆಂಗಳೂರು: ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದ ಮದುಮಗ

- Advertisement -
- Advertisement -

ಬೆಂಗಳೂರು: ಕೊರೊನಾ ಬಂದ್ಮೇಲೆ ಎಲ್ಲರೂ ಸಿಂಪಲ್ ಮದುವೆಯಾಗುತ್ತಿದ್ದಾರೆ. ಸಾವಿರಾರು ಜನರು ಸೇರಬೇಕಾಗಿದ್ದ ಮದುವೆಗೆ ನೂರು ಮಂದಿಗೆ ಸೀಮಿತವಾಗುತ್ತಿದೆ. ಅದರಲ್ಲೂ ಅದ್ಧೂರಿ ಅಂದ್ರೆ ತೀರಾ ಅಪರೂಪ ಆಗಿ ಬಿಟ್ಟಿದೆ. ಆದ್ರೆ ಕೊರೊನಾ ಆರ್ಭಟದ ಮಧ್ಯೆಯೂ ಬೆಂಗಳೂರಿನಲ್ಲಿ ಭಾರೀ ಗ್ರ್ಯಾಂಡ್ ವಿವಾಹ ನಡೆದಿದೆ.

ಹೌದು. ತುಮಕೂರಿನ ಹುಡುಗ ನಿರೂಪ್​ ಹಾಗೂ ಬೆಂಗಳೂರಿನ ಹುಡುಗಿ ಐಶ್ವರ್ಯಾ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಲ್ಲೇನು ವಿಶೇಷ ಅಂತಾ ಯೋಚಿಸುತ್ತಿದ್ದೀರಾ? ಅಂದ್ಹಾಗೆ ಈ ಮದುವೆಗೆ ವರ  ಹೇಗೆ ಬಂದ ಅನ್ನೋದೇ ಇಂಟರೆಸ್ಟಿಂಗ್ ವಿಚಾರ.

ತಲಘಟ್ಟಪುರದ ಬಿಆರ್​ಎಸ್​ ಗ್ರಾಂಡ್ಯುರ್​ನಲ್ಲಿ ನಡೆದ ಈ ವಿವಾಹಕ್ಕೆ ವರ ತುಮಕೂರಿನಿಂದ ಹೆಲಿಕಾಪ್ಟರ್​ನಲ್ಲಿ ಬಂದಿದ್ದಾರೆ. ನಿರೂಪ್​ ವೃತ್ತಿಯಲ್ಲಿ ಬ್ಯುಸಿನೆಸ್​ ಮ್ಯಾನ್. ರೈಸ್ ಮಿಲ್​ ಸಹ ಹೊಂದಿದ್ದಾರೆ. ಬಲರಾಮ್​ ಶೆಟ್ಟಿ ಹಾಗೂ ರಮಾದೇವಿ ದಂಪತಿ ಪುತ್ರನಾದ ಇವರು ಬೆಂಗಳೂರಿನ ಕಿಶೋರ್​ ಮತ್ತು ಮಾಧವಿ ಅವರ ಪುತ್ರಿ ಐಶ್ವರ್ಯಾರನ್ನು ವರಿಸಿದ್ದಾರೆ. ಚಾಪರ್​ ಮೂಲಕ ನಿರೂಪ್ ಕಲ್ಯಾಣ ಮಂಟಪಕ್ಕೆ ಬಂದಿರುವುದು ಈಗ ಸೋಷೊಯಲ್​ ಮೀಡಿಯಾದಲ್ಲಿ ಫುಲ್​ ಸದ್ದು ಮಾಡುತ್ತಿದೆ.

- Advertisement -

Latest News

error: Content is protected !!