Saturday, June 13, 2026
Homeಕರಾವಳಿಮಂಗಳೂರು: ಮದುವೆ ಮಂಟಪಕ್ಕೆ ಬುಲೆಟ್​ ಏರಿ ಬಂದ ಮಧುಮಗಳು.. ವಿಡಿಯೋ ಫುಲ್ ವೈರಲ್

ಮಂಗಳೂರು: ಮದುವೆ ಮಂಟಪಕ್ಕೆ ಬುಲೆಟ್​ ಏರಿ ಬಂದ ಮಧುಮಗಳು.. ವಿಡಿಯೋ ಫುಲ್ ವೈರಲ್

- Advertisement -
- Advertisement -

ಮಂಗಳೂರು: ಮದುವೆ ಮಂಟಪಕ್ಕೆ ಮದುಮಗಳನ್ನು ಕರೆ ತರಲು ವಿಶೇಷ ಸಾಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತದೆ. ಹಿಂದೆಲ್ಲ ನಾಚಿಕೊಂಡು ಬರುವ ಮದುಮಗಳನ್ನು ಪಲ್ಲಕ್ಕಿ ಅಥವಾ ಆಧುನಿಕ ಕಾಲದಲ್ಲಿ ವಾಹನಗಳಲ್ಲಿ ಹೆತ್ತವರ ಜೊತೆ ಕರೆ ತರಲಾಗುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಇಲ್ಲೊಬ್ಬ ವಧು ಮದುವೆ ಮಂಟಪಕ್ಕೆ ಬುಲೆಟ್‌ ನಲ್ಲಿ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಮಂಗಳೂರಿನ ಸುರತ್ಕಲ್ ಮೂಲದ ಪೂಜಾ ಎಂಬ ವಧು ಬುಲೆಟ್ ಮೂಲಕ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಮದುಮಗಳ ಉಡುಪಿನಲ್ಲಿ ಸಂಪೂರ್ಣ ಶೃಂಗಾರ ಕಾವ್ಯ ಬರೆದ ಈಕೆ ಕಣ್ಣಿಗೊಂದು ಗ್ಲಾಸ್ ಧರಿಸಿ ರಾಯಲ್ ಎನ್ ಫೀಲ್ಡ್ 350 ಬುಲೆಟ್ ನಲ್ಲಿ ಎಂಟ್ರಿ ಕೊಟ್ಟಿದ್ದರು.

ಸುರತ್ಕಲ್​ನ ಪೂಜಾ ಹಾಗೂ ಆಕಾಶ್ ಮದುವೆ ನವೆಂಬರ್ 4ರಂದು ನಡೆದಿತ್ತು. ಬುಲೆಟ್ ಪ್ರೇಮಿಯಾಗಿರುವ ಪೂಜಾ, ಸಿಂಗಾರಗೊಂಡಿದ್ದ ಕಾರನ್ನು ಹತ್ತಿ ಬರುವ ಬದಲು ತನ್ನ ಸ್ವಂತ ಬುಲೆಟ್ ಓಡಿಸಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದಳು. ಕಾಸರಗೋಡು ಮೂಲದ ಮ್ಯಾಚ್ ಫ್ರೇಮ್ ವೆಡ್ಡಿಂಗ್ ಸಂಸ್ಥೆಯ ಕ್ಯಾಮರಮೆನ್ಸ್ ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಬುಲೆಟ್ ರಾಣಿಯ ಈ ವಿಡಿಯೋ/ಫೋಟೋಗಳು ಭಾರೀ ಸದ್ದು ಮಾಡುತ್ತಿವೆ.

- Advertisement -

Latest News

error: Content is protected !!