Saturday, June 6, 2026
Homeತಾಜಾ ಸುದ್ದಿಮೊಬೈಲ್ ಬೆಳಕಲ್ಲೇ ಜಗತ್ತುಕಂಡ ಕೂಸು!..ಕರೆಂಟ್ ಕೈಕೊಟ್ಟು ಮೊಬೈಲ್ ಬೆಳಕಿನಲ್ಲಿ ಮಹಿಳೆಗೆ ಹೆರಿಗೆ

ಮೊಬೈಲ್ ಬೆಳಕಲ್ಲೇ ಜಗತ್ತುಕಂಡ ಕೂಸು!..ಕರೆಂಟ್ ಕೈಕೊಟ್ಟು ಮೊಬೈಲ್ ಬೆಳಕಿನಲ್ಲಿ ಮಹಿಳೆಗೆ ಹೆರಿಗೆ

- Advertisement -
- Advertisement -

ಕಲಬುರ್ಗಿ: ಆಸ್ಪತ್ರೆಯಲ್ಲಿ ಕರೆಂಟ್ ಕೈಕೊಟ್ಟ ಪರಿಣಾಮ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ ಘಟನೆ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ನಡೆದಿದೆ. ಮೊಬೈಲ್ ಬೆಳಕಲ್ಲೇ ಮಹಿಳೆಗೆ ನರ್ಸ್ ಹೆರಿಗೆ ಮಾಡಿಸಿದ್ದು ವೈದ್ಯರು ಇರಲಿಲ್ಲವಾದ್ದರಿಂದ ನರ್ಸ್ ಹೆರಿಗೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.

ಕೊಲ್ಲೂರು ಗ್ರಾಮದ ಸಿದ್ದಮ್ಮ ಅವರಿಗೆ ಮಂಗಳವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ರಾತ್ರಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ.ಈ ವೇಳೆ ವೈದ್ಯರು ಮತ್ತು ಕರೆಂಟ್ ಇರಲಿಲ್ಲ.
ನರ್ಸ್ ಆರೋಗ್ಯ ಕೇಂದ್ರದಲ್ಲಿರುವ ಸೋಲಾರ್ ವ್ಯವಸ್ಥೆ ಇಲ್ಲದ ಕಾರಣ 4 -5 ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಿದ್ದು ಸಿದ್ದಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

- Advertisement -

Latest News

error: Content is protected !!