Thursday, June 4, 2026
Homeತಾಜಾ ಸುದ್ದಿಚಿರತೆ ದಾಳಿಗೆ ಅಡುಗೆಭಟ್ಟ ಬಲಿ!

ಚಿರತೆ ದಾಳಿಗೆ ಅಡುಗೆಭಟ್ಟ ಬಲಿ!

- Advertisement -
- Advertisement -

ಕೊಪ್ಪಳ:ಇಲ್ಲಿನ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪ ಚಿರತೆಯೊಂದು ಆದಿಶಕ್ತಿ ದುರ್ಗಾದೇವಿ ದೇಗುಲದ ಅಡುಗೆಭಟ್ಟನನ್ನು ಹೊತ್ತೊಯ್ದ ಘಟನೆ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ. ಈತನು ಕಳೆದ ಆರೇಳು ವರ್ಷಗಳಿಂದ ದೇಗುಲದಲ್ಲಿ ಆಡುಗೆ ಮಾಡಿಕೊಂಡಿದ್ದ ಹುಲುಗೇಶ (24) ಚಿರತೆ ದಾಳಿಗೆ ಬಲಿಯಾದ ಆಡುಗೆ ಭಟ್ಟ.

ಈತನ ದೇಹದ ಭಾಗಗಳು ಆನೆಗೊಂದಿಯ ಮ್ಯಾಗೋಟದ ಬಳಿ ಪತ್ತೆಯಾಗಿದ್ದು, ಹುಲಗೇಶ ಮನೆಯಿಂದ ಹೊರಹೋಗಿದ್ದ ಸಂದರ್ಭ ಚಿರತೆ ದಾಳಿ ಮಾಡಿ ಆತನನ್ನು ಹೊತ್ತೊಯ್ದಿತ್ತು ಎನ್ನಲಾಗಿದೆ.ಅರಣ್ಯ ಅಧಿಕಾರಿಗಳು, ತಹಶೀಲ್ದಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯ ಜನರು ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

- Advertisement -

Latest News

error: Content is protected !!