Monday, June 8, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ : ಹಿರಿಯ ನಟ ಎಚ್.ಜಿ ಸೋಮಶೇಖರ್ ನಿಧನ

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ : ಹಿರಿಯ ನಟ ಎಚ್.ಜಿ ಸೋಮಶೇಖರ್ ನಿಧನ

- Advertisement -
- Advertisement -

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಲನಚಿತ್ರ ರಂಗದ ಹಿರಿಯ ನಟ ಎಚ್.ಜಿ ಸೋಮಶೇಖರ್ ಇನ್ನು ಕೇವಲ ನೆನಪಷ್ಟೇ. ಇಂದು  ಮಧ್ಯಾಹ್ನ ಸೋಮಶೇಖರ್  ಇಹಲೋಕ ತ್ಯಜಿಸಿದ್ದಾರೆ.  86 ವರ್ಷದ ಸೋಮಶೇಖರ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರರಾಯರು ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1981ರಲ್ಲಿ, ಟಿ.ಎಸ್.ರಂಗಾರವರ ನಿರ್ದೇಶನದ ಸಾವಿತ್ರಿ’ ಮೂಲಕ  ಚಿತ್ರರಂಗವನ್ನು ಪ್ರವೇಶಿಸಿದ್ದರು. ಬಳಿಕ  ‘ಮಿಥಿಲೆಯ ಸೀತೆಯರು’, ‘ಹರಕೆಯ ಕುರಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಇನ್ನು ‘ಹರಕೆಯ ಕುರಿ’ ಚಿತ್ರದ ಅಭಿನಯಕ್ಕಾಗಿ 1992-93ರಲ್ಲಿ ರಾಹ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರು. ಸೋಮಶೇಖರ್ ಅವರು ಬ್ಯಾಂಕ್ ನಿಂದ ನಿವೃತ್ತಿಯಾದ ಬಳಿಕ ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಇನ್ನು ಸೋಮಶೇಖರ್ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!