Sunday, June 7, 2026
Homeತಾಜಾ ಸುದ್ದಿಶಿವಮೊಗ್ಗ: ಹಂದಿ ಹಿಡಿಯಲು ಇಟ್ಟಿದ್ದ ಕಚ್ಚಾ ಬಾಂಬ್ ಸಿಡಿದು 9 ಮಂದಿಗೆ ತೀವ್ರ ಗಾಯ

ಶಿವಮೊಗ್ಗ: ಹಂದಿ ಹಿಡಿಯಲು ಇಟ್ಟಿದ್ದ ಕಚ್ಚಾ ಬಾಂಬ್ ಸಿಡಿದು 9 ಮಂದಿಗೆ ತೀವ್ರ ಗಾಯ

- Advertisement -
- Advertisement -

ಶಿವಮೊಗ್ಗ: ಕಾಡು ಹಂದಿ ಭೇಟೆಯಾಡಲು ಬಳಸುವ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ, 9 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಮತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಚೇನಹಳ್ಳಿಯಲ್ಲಿ ನಡೆದಿದೆ.

ಕುಂಚೇನಹಳ್ಳಿಯ ಸಮೀಪ ತಮಿಳ್‌ ಕುಮಾರ್‌ ಎಂಬುವರ ಮನೆಯಲ್ಲೇ ಕಾಡು ಹಂದಿ ಭೇಟೆಯಾಡಲು ಬಳಸುವ ನಾಡಬಾಂಬ್ ತಯಾರಿಸಲಾಗುತ್ತಿತ್ತು. ಈ ವೇಳೆ ನಾಡಬಾಂಬ್‌ಗಳನ್ನು ಬಿಸಿಲಿಗೆ ಒಣಗಿಸಲು ಇಡಲಾಗಿದ್ದು, ಇದ್ದಕ್ಕಿಂದಂತೆ ಬಾಂಬ್‌ಗಳು ಆಕಸ್ಮಿಕವಾಗಿ ಸ್ಫೋಟಗೊಂಡಿವೆ.

ಹೀಗಾಗಿ ಸ್ಥಳದಲ್ಲಿದ್ದ 9 ಮಂದಿ ಗಾಯಗೊಂಡಿದ್ದಾರೆ. ಮತ್ತೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಈ ವ್ಯಕ್ತಿಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸುತ್ತಿದ್ದಾರೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಾಡು ಹಂದಿ ಬೇಟೆ ಸಾಮಾನ್ಯವಾಗಿದೆ. ತೋಟಕ್ಕೆ ಕಾಡುಹಂದಿ ದಾಳಿ ಮಾಡಿ ನಂತರ ಆಗುವ ಬೆಳೆಹಾನಿಗಳನ್ನು ತಪ್ಪಿಸಲು ಹಾಗೂ ಬೇಟೆಯಾಡಿ ಮಾಂಸ ಮಾಡಿ ಮಾರಾಟ ಮಾಡುವ ದೃಷ್ಟಿಯಿಂದ ವ್ಯಾಪಕವಾಗಿ ಕಚ್ಚಾ ಬಾಂಬ್ ಬಳಕೆಯಾಗುತ್ತಿದೆ.

- Advertisement -

Latest News

error: Content is protected !!