Sunday, June 7, 2026
Homeತಾಜಾ ಸುದ್ದಿನಾಲ್ವರು ದಂತಚೋರರ ಬಂಧನ- 25 ಕೆ.ಜಿ ತೂಕದ ಆನೆದಂತ ವಶ!..

ನಾಲ್ವರು ದಂತಚೋರರ ಬಂಧನ- 25 ಕೆ.ಜಿ ತೂಕದ ಆನೆದಂತ ವಶ!..

- Advertisement -
- Advertisement -

ಮೈಸೂರು:ಇಲ್ಲಿನ ಬನ್ನಿಮಂಪಟದ ಕೆಳಸೇತುವೆ ಬಳಿ ದಂತಚೋರರು 4 ಆನೆದಂತಗಳನ್ನು 8 ಭಾಗಗಳನ್ನಾಗಿ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಅರಣ್ಯ ಸಂಚಾರ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 25 ಕೆ.ಜಿ ತೂಕದ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಿರುವನಂತಪುರದ ಪ್ರೆಸ್ಟಿನ್ ಸೆಲ್ವ, ಜಯಪ್ರಕಾಶ್‌, ಇಲ್ಲಿನ ಉದಯಗಿರಿಯ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಬಂಧಿತರು.ಇವರು ದಂತಗಳನ್ನು ಒಂದು ಕೆ.ಜಿಗೆ 20 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಇವರಲ್ಲಿ ಪ್ರೆಸ್ಟಿನ್ ಸೆಲ್ವ ವಿರುದ್ಧ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಮೇಶ್ ಮತ್ತು ಮೋಹನ್ ವಿಗ್ರಹ ಕೆತ್ತುವ ಕಲಾವಿದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!