ಮೈಸೂರು: ಈ ಬಾರಿಯ ದಸರಾ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಕಷ್ಟು ಸರಳವಾಗಿ ಆಚರಣೆಯಾಗಿದೆ.ಈ ಮೂಲಕ ಸರ್ಕಾರದ ಹಣ ಉಳಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿಕೊಂಡಿದೆ. ನಿನ್ನೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದಸರಾದ ವೆಚ್ಚದ ಲೆಕ್ಕ ಪತ್ರದ ಮಾಹಿತಿ ನೀಡಿದ್ದು ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರು ಈ ಕುರಿತು ಆಕ್ಷೇಪವೆತ್ತಿದ್ದಾರೆ.ಚಾಮುಂಡೇಶ್ವರಿ ಬೆಟ್ಟ ಹಾಗೂ ಅರಮನೆಯ ಆವರಣಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮಗಳಿಗೆ 2.05 ರೂ.ಕೋಟಿ ರುಪಾಯಿ ಖರ್ಚಿನ ಲೆಕ್ಕವನ್ನು ಮೈಸೂರು ಜಿಲ್ಲಾಡಳಿತ ತೋರಿಸಿದೆ.
ಐದು ಆನೆಗಳು ಈ ಬಾರಿ ದಸರಾದಲ್ಲಿ ಭಾಗವಹಿಸಿದ್ದು,5 ದಿನಗಳಿಗೆ ಐದು ಆನೆಗಳ ಖರ್ಚು ಎಂದು 35 ಲಕ್ಷ ರೂ. ಬಿಲ್ ತೋರಿಸಲಾಗಿದೆ. ಅಂದರೆ ಒಂದು ಆನೆಗೆ 7 ಲಕ್ಷ ರುಪಾಯಿ ವೆಚ್ಚ ತೋರಿಸಲಾಗಿದೆ. ರಾಜವಂಶಸ್ಥರಿಗೆ ಗೌರವಧನ 40 ಲಕ್ಷ ರೂ.ನೀಡಲಾಗಿದ್ದು, ಕಳೆದ ವರ್ಷ 25 ಲಕ್ಷ ರೂ. ನೀಡಲಾಗಿತ್ತು. ಸರಳ ದಸರಾ ಆಗಿದ್ದರಿಂದ ಗೌರವಧನ ಕಡಿಮೆ ಮಾಡಬಹುದಿತ್ತು ಎಂದು ಸಾರ್ವಜನಿಕರು ಆಕ್ಷೇಪವೆತ್ತಿದ್ದಾರೆ.