Saturday, June 6, 2026
Homeತಾಜಾ ಸುದ್ದಿಕಳ್ಳತನಕ್ಕೆ ಆಗಮಿಸಿದ್ದ ಖದೀಮರು ಮಹಿಳೆಯ ಕಿವಿಯನ್ನೇ ಕತ್ತರಿಸಿದರು!…

ಕಳ್ಳತನಕ್ಕೆ ಆಗಮಿಸಿದ್ದ ಖದೀಮರು ಮಹಿಳೆಯ ಕಿವಿಯನ್ನೇ ಕತ್ತರಿಸಿದರು!…

- Advertisement -
- Advertisement -

ರಾಯಚೂರು: ಇಲ್ಲಿನ ಕುಕುನುರು ಗ್ರಾಮದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ಮೂವರು ಖದೀಮರು ಅಡ್ಡಿಪಡಿಸಲು ಬಂದ ಮಹಿಳೆ ಕಿವಿಯನ್ನೇ ಕತ್ತರಿಸಿದ ಪ್ರಸಂಗ ನಡೆದಿದೆ.ಗ್ರಾಮದ ಹನುಮಂತ್ರಾಯ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದು ಹಣ ನಗದು ಸೇರಿದಂತೆ ಕೆಲ ದಾಖಲೆಗಳನ್ನು ಕದ್ದಿದ್ದಾರೆ.
ಈ ವೇಳೆ ಕಳ್ಳರ ಗುಂಪಿನಲ್ಲಿದ್ದ ಅದೇ ಗ್ರಾಮದ ಮನೋಜ್ ಎನ್ನುವ ಯುವಕನನ್ನು ಹಿಡಿದ ಗ್ರಾಮಸ್ಥರು ಗಿಡಕ್ಕೆ ಕಟ್ಟಿ ಹಾಕಿ ಹೊಡೆದ ಘಟನೆ ವರದಿಯಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!