- Advertisement -
![]()
- Advertisement -
ಉತ್ತರ ಪ್ರದೇಶ: ಸರಕಾರ ನೀಡುವ ಸೌಲಭ್ಯ ಸಾಲುತ್ತಿಲ್ಲ ಎಂದು ಹೇಳುವವರ ಮಧ್ಯೆ ಇಲ್ಲಿನ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಮೂರು ವಾರದ ಮಗುವನ್ನ ಕಚೇರಿಗೆ ಕರೆದುಕೊಂಡು ಬರುವ ಮಹಿಳಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಸೌಮ್ಯ ಪಾಂಡೆ ಕಚೇರಿ ಕೆಲಸದ ಜೊತೆ ಜೊತೆಯೇ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದಾರೆ.
ಸೌಮ್ಯಾ ಪಾಂಡೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಮಗುವನ್ನ ಆರೈಕೆ ಮಾಡ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಮಂದಿ ಸೌಮ್ಯ ಪಾಂಡೆ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಯೂಟ್ ಎಂದಿದ್ದಾರೆ.
- Advertisement -


