Saturday, June 6, 2026
Homeತಾಜಾ ಸುದ್ದಿಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೂ ಮಧ್ಯಂತರ ರಜೆ ಸೌಲಭ್ಯವನ್ನು ನೀಡುವಂತೆ ಜೆಡಿಎಸ್‌ ಒತ್ತಾಯ;

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೂ ಮಧ್ಯಂತರ ರಜೆ ಸೌಲಭ್ಯವನ್ನು ನೀಡುವಂತೆ ಜೆಡಿಎಸ್‌ ಒತ್ತಾಯ;

- Advertisement -
- Advertisement -

ಬೆಂಗಳೂರು: ಕೋವಿಡ್‌ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿತರಾಗಿರುವ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೂ ಮಧ್ಯಂತರ ರಜೆ ಸೌಲಭ್ಯದ ಅವಶ್ಯಕತೆಯಿದೆ. ಎಂದು ರಾಜ್ಯ ಸರ್ಕಾರವನ್ನು ಜೆಡಿಎಸ್‌ ಒತ್ತಾಯಿಸಿದೆ.

‘ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಚುನಾವಣೆಯ ಅಗತ್ಯವಿರಲಿಲ್ಲ. ಆದರೂ, ಅಕ್ಟೋಬರ್‌ 28ರಂದು ವಿಧಾನ ಪರಿಷತ್‌ನ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈಗ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಮಧ್ಯಂತರ ರಜೆ ಘೋಷಿಸಲಾಗಿದೆ. ಈ ಅವಕಾಶವನ್ನು ಪದವಿಪೂರ್ವ ಕಾಲೇಜುಗಳಿಗೂ ವಿಸ್ತರಿಸಲು ಜೆಡಿಎಸ್ ಮನವಿ ಮಾಡಿದೆ
ಶಿಕ್ಷಕರಿಗೆ ನೀಡಿರುವ ಮಧ್ಯಂತರ ರಜೆಯ ಸೌಲಭ್ಯವನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೂ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದೆ.

- Advertisement -

Latest News

error: Content is protected !!