Sunday, June 7, 2026
Homeಕರಾವಳಿಉಡುಪಿಸಸಿಹಿತ್ಲು ಅಳಿವೆಯಲ್ಲಿ ದೋಣಿ ಮಗುಚಿ ನಾಪತ್ತೆಯಾದ ಮೀನುಗಾರ ಪತ್ತೆ

ಸಸಿಹಿತ್ಲು ಅಳಿವೆಯಲ್ಲಿ ದೋಣಿ ಮಗುಚಿ ನಾಪತ್ತೆಯಾದ ಮೀನುಗಾರ ಪತ್ತೆ

- Advertisement -
- Advertisement -

ಮೂಲ್ಕಿ:ಇಲ್ಲಿನ ಹಳೆಯಂಗಡಿ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆಯಲ್ಲಿ ಹೆಜಮಾಡಿಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಐದು ಮಂದಿ ಪಾರಾಗಿದ್ದು ಒರ್ವ ನಾಪತ್ತೆಯಾದ ಘಟನೆ ರವಿವಾರ ತಡರಾತ್ರಿ ನಡೆದಿದೆ.ತೀವ್ರ ಶೋಧ ಕಾರ್ಯಾಚರಣೆಯ ನಂತರ ಮೀನುಗಾರ ಹೆಜಮಾಡಿ ಬಳಿಯ ಸುಕೇಶ್ ಬಪ್ಪನಾಡು (25) ಪತ್ತೆಯಾಗಿದ್ದಾರೆ.

ಹೆಜಮಾಡಿ ಪ್ರದೇಶದ ಏಕನಾಥ ಕರ್ಕೇರ ಎಂಬವರ ಮಾಲಕತ್ವದ ಪಟ್ಟೆಬಲೆ ದೋಣಿಯಲ್ಲಿ ಏಕನಾಥ ಕರ್ಕೇರ, ಪಾಂಡುರಂಗ, ರಾಜೇಶ್, ನೀರಜ್ ಮತ್ತು ನಾಗೇಶ್, ಸುಕೇಶ್ ಸೇರಿ ಆರು ಮಂದಿ ಮೀನುಗಾರಿಕೆಗೆ ತೆರಳಿ ರಾತ್ರಿ ಹಿಂದುರುಗುತ್ತಿದ್ದಾಗ ಈ ಘಟನೆ ನಡೆದಿದೆ.

- Advertisement -

Latest News

error: Content is protected !!