Saturday, June 6, 2026
Homeತಾಜಾ ಸುದ್ದಿಸಾಹಿತಿ ಕೆ.ಕಲ್ಯಾಣ್ ಕುಟುಂಬ ಒಡೆದಿದ್ದ ಮಂತ್ರವಾದಿ ಶಿವಾನಂದ ವಾಲಿ ಬಣ್ಣ ಬಯಲು- ಖದೀಮ ಕಬಳಿಸಿದ್ದ ಆಸ್ತಿ...

ಸಾಹಿತಿ ಕೆ.ಕಲ್ಯಾಣ್ ಕುಟುಂಬ ಒಡೆದಿದ್ದ ಮಂತ್ರವಾದಿ ಶಿವಾನಂದ ವಾಲಿ ಬಣ್ಣ ಬಯಲು- ಖದೀಮ ಕಬಳಿಸಿದ್ದ ಆಸ್ತಿ ಎಷ್ಟು ಗೊತ್ತಾ?

- Advertisement -
- Advertisement -

ಬೆಳಗಾವಿ: ಚಿತ್ರ ಸಾಹಿತಿ ಕೆ.ಕಲ್ಯಾಣ್ ದಂಪತಿ ನಡುವೆ ವಿರಸ ತಂದಿಟ್ಟ ಮಂತ್ರವಾದಿ ಶಿವಾನಂದ ವಾಲಿ ಕಲ್ಯಾಣ್ ಕುಟುಂಬದ ಸುಮಾರು 5ರಿಂದ 6 ಕೋಟಿಗೂ ಹೆಚ್ಚು ಆಸ್ತಿ ಕಬಳಿಕೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಕುರಿತು ಡಿಸಿಪಿ ವಿಕ್ರಂ ಅಮಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿವಾನಂದ ವಾಲಿ ಮಾಟ ಮಂತ್ರದ ಮೂಲಕ ವಂಚನೆ ಮಾಡಿ ಆಸ್ತಿ ಕಬಳಿಕೆ ಮಾಡಿದ್ದಾನೆ.ಕಲ್ಯಾಣ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂತ್ರವಾದಿ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ಸಂದರ್ಭದಲ್ಲಿ ಕೆ. ಕಲ್ಯಾಣ ಅವರ ಕುಟುಂಬವನ್ನು ವಂಚಿಸಿದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದರು. ಮಾಳಮಾರುತಿ ಠಾಣೆ ಪೊಲೀಸರು ಆತನ ವಶದಲ್ಲಿದ್ದ 9 ಟ್ಯಾಕ್ಸಿ, 6 ಕೆಜಿ ಬೆಳ್ಳಿ, ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಮಧ್ಯೆ ಧಾರವಾಡ, ಬೆಂಗಳೂರು, ಬೆಳಗಾವಿ, ಹುಬ್ಬಳಿ ಇತರ ನಗರಗಳಲ್ಲಿನ ಆಸ್ತಿಪಾಸ್ತಿ ಶಿವಾನಂದ ವಾಲಿಯೇ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!