Friday, June 5, 2026
Homeಮಹಾನ್ಯೂಸ್ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ ಪತಿ ಮಹಾಶಯ

ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ ಪತಿ ಮಹಾಶಯ

- Advertisement -
- Advertisement -

ಪುಣೆ: ಹಣಕ್ಕಾಗಿ ಪುಟ್ಟ ಮಕ್ಕಳನ್ನು ಕಿಡ್ನ್ಯಾಪ್ ಮಾಡೋರನ್ನು ನೋಡಿದ್ದೇವೆ. ಆದ್ರೆ ಹೆತ್ತಪ್ಪನೇ ಮಗನನ್ನು ಕಿಡ್ನ್ಯಾಪ್ ಮಾಡೋದನ್ನು ಕೇಳಿದ್ದೀರಾ? ಆದ್ರೆ ಇಂತಹದ್ದೊಂದು ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


3 ವರ್ಷದ ತನ್ನ ಮಗನನ್ನು ಅಪಹರಣ ಮಾಡಿದಕ್ಕಾಗಿ ಮಹಾರಾಷ್ಟ್ರದ ಸೊಲ್ಹಾಪುರ ಮೂಲದ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪತ್ನಿ ಕೆಲವು ತಿಂಗಳ ಹಿಂದೆ ಆಕೆಯ ತವರು ಮನೆಗೆ ತೆರಳಿದ್ದು, ವಾಪಸ್ ಬಂದಿರಲಿಲ್ಲ. ಹೀಗಾಗಿ ಪತ್ನಿ ನೆನಪಲ್ಲೇ ಇದ್ದ ವ್ಯಕ್ತಿ ಆಕೆ ವಾಪಸ್ ಬರುವಂತೆ ಮಾಡಲು ತನ್ನ ಮಗನನ್ನೇ ಕಿಡ್ನಾಪ್ ಮಾಡುವ ಪ್ಲಾನ್ ಮಾಡಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿ ದ್ದಾನೆ. ಅಂತೆಯೇ ಬಾಲಕನನ್ನು ಅಪಹರಿಸುವ ಮೂಲಕ ಸ್ನೇಹಿತರು ವ್ಯಕ್ತಿಗೆ ಸಹಾಯ ಮಾಡಿದ್ದಾರೆ.


ಇತ್ತ 3 ವರ್ಷದ ಪುಟ್ಟ ಕಂದಮ್ಮ ಎಲ್ಲೂ ಕಾಣಿಸದಿದ್ದಾಗ ಮಹಿಳೆಯ ತಾಯಿ, ಮೊಮ್ಮಗನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ದೂರಿನಲ್ಲಿ ಮಧ್ಯಾಹ್ನದ ವೇಳೆ ತನ್ನ ಮನೆಯ ಬಳಿ ಅಪರಿಚಿತ ವ್ಯಕ್ತಿಗಳು ಓಡಾಡಿದ್ದನ್ನು ನೋಡಿರುವುದಾಗಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!