Thursday, June 4, 2026
Homeತಾಜಾ ಸುದ್ದಿಅಪ್ರಾಪ್ತ ಬಾಲಕಿಯೊಂದಿಗೆ ಬಾಡಿಗೆ ರೂಮ್ ಗೆ ಬಂದ ಯುವಕನಿಂದ ದುಡುಕಿನ ನಿರ್ಧಾರ

ಅಪ್ರಾಪ್ತ ಬಾಲಕಿಯೊಂದಿಗೆ ಬಾಡಿಗೆ ರೂಮ್ ಗೆ ಬಂದ ಯುವಕನಿಂದ ದುಡುಕಿನ ನಿರ್ಧಾರ

- Advertisement -
- Advertisement -

ಬಾಗಲಕೋಟೆ: ಜಿಲ್ಲೆಯ ಮುಧೋಳ ನಗರದ ಬಸವನಗರದಲ್ಲಿ ಅಪ್ರಾಪ್ತೆ ಮತ್ತು ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆನಂದ (23) ಮತ್ತು 15 ವರ್ಷದ ಬಾಲಕಿ ಮೃತ ದುರ್ದೈವಿಗಳು. ಆನಂದ ವಾಸವಿದ್ದ ಬಸವನಗರದ ಬಾಡಿಗೆ ರೂಮಿನಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಮುಧೋಳ‌ ನಗರದ ರನ್ನ ವೃತ್ತದ ಬಳಿಯ ಬೇಕರಿಯಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ ತನ್ನದೇ ಗ್ರಾಮದ ಬಾಲಕಿಯನ್ನು ಪ್ರೀತಿಸಿದ್ದಾನೆ.

ಹುಡುಗಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು,ಸಾಯುವ ಮುನ್ನ ಯುವಕ ವಾಟ್ಸ್​ಆಯಪ್​ನಲ್ಲಿ ಸ್ಟೇಟಸ್ ಹಾಕಿದ್ದು, ಆಲ್ ಫ್ರೆಂಡ್ಸ್​ ಮಿಸ್ ಯು, ಅವ್ವ-ಅಪ್ಪ ಮಿಸ್ ಯು ಎಂದು ಬರೆದುಕೊಂಡಿದ್ದಾನೆ. ಸ್ಥಳಕ್ಕೆ ಮುಧೋಳ‌ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!