Friday, June 5, 2026
Homeತಾಜಾ ಸುದ್ದಿ"ಕಿಡ್ನಾಪ್ ಪ್ರಕರಣದಲ್ಲಿ ಕೇಳಿಬರ್ತಿದೆ ಸುನಾಮಿ ಕಿಟ್ಟಿ ಹೆಸರು" ಜೈಲು ಪಾಲಾಗ್ತಾರಾ ಸುನಾಮಿ?

“ಕಿಡ್ನಾಪ್ ಪ್ರಕರಣದಲ್ಲಿ ಕೇಳಿಬರ್ತಿದೆ ಸುನಾಮಿ ಕಿಟ್ಟಿ ಹೆಸರು” ಜೈಲು ಪಾಲಾಗ್ತಾರಾ ಸುನಾಮಿ?

- Advertisement -
- Advertisement -

ಬೆಂಗಳೂರು: ಫೈನಾನ್ಶಿಯರ್ ನವೀನ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಆರೋಪಿಗಳನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದು, ಪ್ರಕರಣದ ಹಿಂದೆ ಸುನಾಮಿ ಕಿಟ್ಟಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಸುನಾಮಿ ಕಿಟ್ಟಿಯನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.ಫೈನಾನ್ಶಿಯರ್ ನವೀನ್ ನಿಂದ ಸುನಾಮಿ ಕಿಟ್ಟಿ ಹಣ ಪಡೆದಿದ್ದು, ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಬಂಧಿತ ಆರೋಪಿಗಳಾದ ಮೋಹನ್, ಮಹೇಶ್, ನವ್ಯಂತ್, ಜೋಸೆಫ್, ಭರತ್, ರಾಜು ಹಾಗೂ ರವಿಕಿರಣ್ ಎಂಬುವವರು ಸುನಾಮಿ ಕಿಟ್ಟಿ ಹೆಸರನ್ನು ಬಾಯ್ಬಿಟ್ಟಿದ್ದು, ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ಕೂಡ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಸುನಾಮಿ ಕಿಟ್ಟಿಯನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!