Thursday, June 4, 2026
Homeಕರಾವಳಿಸಿಸಿಬಿ ವಿಚಾರಣೆಯ ಬಳಿಕ ನಟಿ, ನಿರೂಪಕಿ ಅನುಶ್ರೀ ಹೇಳಿದ್ದೇನು?

ಸಿಸಿಬಿ ವಿಚಾರಣೆಯ ಬಳಿಕ ನಟಿ, ನಿರೂಪಕಿ ಅನುಶ್ರೀ ಹೇಳಿದ್ದೇನು?

- Advertisement -
- Advertisement -

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ, ನಿರೂಪಕಿ ಅನುಶ್ರೀ ಅವರ ವಿಚಾರಣೆ ಪೂರ್ಣಗೊಂಡಿದೆ.ಸತತ ನಾಲ್ಕು ಗಂಟೆಗಳ ಕಾಲ ಅನುಶ್ರೀ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆ ಅನುಶ್ರೀ ಅವರಿಗೆ ವಿಚಾರಣೆಗೆ ಹಾಜರಾಗೋದಕ್ಕೆ ನೋಟಿಸ್ ನ್ನು ನೀಡಲಾಗಿತ್ತು.ಆದ್ರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಬೆಳ್ಳಂಬೆಳಗ್ಗೆ ಅವರು ಪಣಂಬೂರು ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ಇನ್ನು ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನುಶ್ರೀ, “ನಾನು ಪೊಲೀಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮುಂದೆಯೂ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಹಾಗೇ ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಲಿ” ಎಂದು ಹೇಳಿದ್ರು . “ಅಲ್ಲದೇ ನಾನು ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ” ಎಂದು ಸ್ಪಷ್ಟಪಡಿಸಿದ್ರು.

- Advertisement -

Latest News

error: Content is protected !!