- Advertisement -
- Advertisement -
ಸುಬ್ರಹ್ಮಣ್ಯ: ಕಳೆದ ದಿನ ರಾತ್ರಿ ಮರವೊಂದು ಮನೆಯ ಮುಂಭಾಗಕ್ಕೆ ಮುರಿದು ಬಿದ್ದು ಭಾಗಶಃ ಹಾನಿಯುಂಟಾದ ಘಟನೆ ಯೇನುಕಲ್ಲು ಗ್ರಾಮದ ಮಾವಂಜಿಯಲ್ಲಿ ನಡೆದಿದೆ,
ಮಾವಂಜಿ ದಿ. ರಾಮಚಂದ್ರರವರ ಪತ್ನಿ ಶ್ರೀಮತಿ ಚಂದ್ರಾವತಿಯವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು, ಈಗಲೋ ಆಗಲೋ ಬೀಳುವಂತಿದೆ. ಮನೆಯ ಮಾಡಿಂದ ನೀರು ಜನಿಯುವುದಕ್ಕೆ ಮನೆಯ ಮೇಲೆ ಟರ್ಪಾಲು ಹೊದಿಸಲಾಗಿದೆ. ಸರಿಯಾದ ಮಾರ್ಗದ ವ್ಯವಸ್ಥೆಯಿಲ್ಲದೆ ಮನೆ ಕಟ್ಟಲು ಬೇಕಾದ ಸಾಮಾಗ್ರಿಗಳನ್ನು ತರಲು ಅನಾನುಕೂಲವಾಗಿರುವುದರಿಂದ ಹೊಸ ಮನೆ ನಿರ್ಮಿಸಲು ಆಗಲಿಲ್ಲ ಎಂಬುದು ಚಂದ್ರಾವತಿಯವರ ಅಳಲು.
ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮತ್ತಿತರರು ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರೂ ಚಂದ್ರಾವತಿಯವರಿಗೆ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.
- Advertisement -