- Advertisement -
- Advertisement -
ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ನಡೆದ ಪರೀಕ್ಷೆಯಲ್ಲಿ ರಾಜಸ್ಥಾನದ ಬಿಜೆಪಿ ಸಂಸದ ಸುಖ್ ಬೀರ್ ಸಿಂಗ್ ರಿಗೆ ಕೊರೋನ ವೈರಸ್ ದೃಢಪಟ್ಟಿದೆ.
ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ಇದೇ ಸಂಸದ ಸುಖ್ ಬೀರ್ ಸಿಂಗ್, ಕೆಸರಿನಲ್ಲಿ ಕುಳಿತರೆ ಮತ್ತು ಶಂಖ ಊದಿದರೆ ಕೊರೋನ ಬರುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು.
ಕೆಸರಿನಲ್ಲಿ ಕುಳಿತು, ಮಣ್ಣಿನ ಲೇಪ ಮಾಡಿಕೊಂಡು ಶಂಖ ಊದುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಕೊರೋನ ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ ಎಂದವರು ಹೇಳಿದ್ದರು.
ಆದರೆ ಈಗ ಸುಖ್ ಬೀರ್ ಸಿಂಗ್ ಗೆ ಕೊರೋನಾ ಪಾಸಿಟಿವ್ ಆಗಿರುವುದರಿಂದ ಈ ಹಿಂದೆ ಸಂಸದರ ವಿಡಿಯೋ ನೋಡಿ ಕೆಸರಿನಲ್ಲಿ ಕೂತು ಶಂಖ ಊದಿದವರು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ.
- Advertisement -