Saturday, June 6, 2026
Homeತಾಜಾ ಸುದ್ದಿಕಾರಿಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಲಾರಿ, ಒಂದೇ ಕುಟುಂಬದ ಮೂವರು ಸಾವು

ಕಾರಿಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಲಾರಿ, ಒಂದೇ ಕುಟುಂಬದ ಮೂವರು ಸಾವು

- Advertisement -
- Advertisement -

ಚಿಕ್ಕಬಳ್ಳಾಪುರ: ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಚಿಕ್ಕಬಳ್ಳಾಪುರ ತಾಲೂಕು ದೊಡ್ಡಪ್ಯಾಯಲಗುರ್ಕಿ ಬಳಿ ರಾತ್ರಿ 1 ಗಂಟೆಗೆ ಘಟನೆ ಸಂಭವಿಸಿದ್ದು, ಹಿಂಬದಿಯಿಂದ ಲಾರಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂದೆ ಸ್ಥಿತಿ ಗಂಭೀರವಾಗಿದೆ.

ಲಾರಿ ಡಿಕ್ಕಿ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಗುರುತಿಸಲು ಸಹ ಸಾಧ್ಯವಾಗದಷ್ಟು ಅಪ್ಪಚ್ಚಿಯಾಗಿದೆ. ಮೃತ ದುರ್ದೈವಿಗಳು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಮಾರ್ವಾಡಿ ಸಮಾರಂಭಕ್ಕೆ ಬಂದಿದ್ದರು. ಸಮಾರಂಭ ಮುಗಿಸಿ ಈ ಮಾರ್ವಾಡಿ ಕುಟುಂಬವು ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣ ಮಾಡುತ್ತಿರುವಾಗ ಈ ಅವಘಡ ಸಂಭವಿಸಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಪೈಲಗೂರ್ಕಿ ಹೈವೇ ಬಳಿ ಪ್ರಕರಣ ನಡೆದಿದೆ.

- Advertisement -

Latest News

error: Content is protected !!