Friday, June 5, 2026
Homeತಾಜಾ ಸುದ್ದಿಕುಡಿದ ಮತ್ತಿನಲ್ಲಿ 3 ವರ್ಷದ ಮಗುವನ್ನು ಕೊಂದ ಪಾಪಿ ತಂದೆ

ಕುಡಿದ ಮತ್ತಿನಲ್ಲಿ 3 ವರ್ಷದ ಮಗುವನ್ನು ಕೊಂದ ಪಾಪಿ ತಂದೆ

- Advertisement -
- Advertisement -

ಉತ್ತರ ಪ್ರದೇಶ : ಇಲ್ಲಿನ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗಳನ್ನು ನೆಲದ ಮೇಲೆ ಎಸೆದು ಹತ್ಯೆ ಮಾಡಿದ್ದಾನೆ. ಹೆಂಡತಿಯನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಗೌತಮ್ ಬುದ್ಧ ನಗರ ಜಿಲ್ಲೆಯ ಬರಾಲಾ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡುಕ ಅಮಿತ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದ. ನಂತರ ಹೆಣ್ಣು ಮಗುವಿನ ಹತ್ಯೆ ಮಾಡಿದ್ದಾನೆ. ಯುವಕ ಪ್ರತಿದಿನ ಮದ್ಯದ ವಿಷ್ಯಕ್ಕೆ ಜಗಳ ಮಾಡ್ತಿದ್ದ ಎನ್ನಲಾಗಿದೆ.

ಪತ್ನಿ ರೇಣು ಜೊತೆ ಗಲಾಟೆ ಮಾಡಿಕೊಂಡ ವ್ಯಕ್ತಿ ನಂತ್ರ ಮೂರು ವರ್ಷದ ಮಗುವನ್ನು ನೆಲಕ್ಕೆ ಎಸೆದು ಹತ್ಯೆ ಮಾಡಿದ್ದಾನೆ. ನಂತ್ರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೆಂಡತಿ ಪ್ರಜ್ಞೆ ತಪ್ಪುತ್ತಿದ್ದಂತೆ ಪತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆ ಕಾರ್ಯ ಶುರು ಮಾಡಿದ್ದಾರೆ.

- Advertisement -

Latest News

error: Content is protected !!