Saturday, October 10, 2026
Homeತಾಜಾ ಸುದ್ದಿರಂಭಾಪುರಿ ಶ್ರೀಗಳಿಗೆ 'ಕೊರೊನಾ ಪಾಸಿಟಿವ್'

ರಂಭಾಪುರಿ ಶ್ರೀಗಳಿಗೆ ‘ಕೊರೊನಾ ಪಾಸಿಟಿವ್’

- Advertisement -
- Advertisement -

ಚಿಕ್ಕಮಗಳೂರು : ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ವಾಮೀಜಿಗೆ ಸೋಮವಾರ ಜ್ವರ ಕಾಣಿಸಿಕೊಂಡಿತ್ತು. ಪಟ್ಟಣದ ಆರೋಗ್ಯ ಕೇಂದ್ರದ ವೈದ್ಯರು ಮಂಗಳವಾರ ಮಾದರಿ ಪರೀಕ್ಷೆ ಮಾಡಿದ್ದು, ಕೊರೊನಾ ಸೋಂಕು ಖಾತರಿಯಾಗಿದೆ.

‘ಜ್ವರಕ್ಕೆ ಚಿಕಿತ್ಸೆ ಪಡೆದಿದ್ದು ಕಡಿಮೆಯಾಗಿದೆ. ಲಕ್ಷಣಗಳು ಇಲ್ಲ, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದು, ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗುತ್ತೇನೆ’ ಎಂದು ರಂಭಾಪುರಿಶ್ರೀ ಗಳು ಮಾದ್ಯಮಕ್ಕೆ ತಿಳಿಸಿದರು.

- Advertisement -

Latest News

error: Content is protected !!