Saturday, June 6, 2026
Homeಮನರಂಜನೆಚಂದನ್ ಶೆಟ್ಟಿಗೆ ಮತ್ತೊಂದು ಸಂಕಷ್ಟ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ವಿರುದ್ಧ ದೂರು ದಾಖಲು

ಚಂದನ್ ಶೆಟ್ಟಿಗೆ ಮತ್ತೊಂದು ಸಂಕಷ್ಟ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ವಿರುದ್ಧ ದೂರು ದಾಖಲು

- Advertisement -
- Advertisement -

ಬೆಂಗಳೂರು: ‘ಕೋಲುಮಂಡೆ’ ರ್ಯಾಪ್ ಸಾಂಗ್ ನಿಂದಾಗಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮಲೈಮಹದೇಶ್ವರ ಸ್ವಾಮಿ ಭಕ್ತರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಚಂದನ್ ಶೆಟ್ಟಿ ವಿರುದ್ಧ ದೂರು ನೀಡಿದ್ದು ದೂರು ಸ್ವೀಕರಿಸಿದ ಪೊಲೀಸರು ಎಸ್.ಸಿ.ಆರ್. ದಾಖಲಿಸಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ. ಅಭಿಪ್ರಾಯ ಪಡೆದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.

‘ಕೋಲುಮಂಡೆ’ ರ್ಯಾಪ್ ಸಾಂಗ್ ಸಂಯೋಜಿಸಿದ್ದ ಚಂದನ್ ಶೆಟ್ಟಿ ಇದರಲ್ಲಿ ಶಿವಶರಣರನ್ನು ಅಶ್ಲೀಲವಾಗಿ ಚಿತ್ರಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಹಾಡಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಂದನ್ ಶೆಟ್ಟಿ ಕ್ಷಮೆ ಯಾಚಿಸಿದ್ದು ಯೂಟ್ಯೂಬ್ ನಿಂದ ಹಾಡು ತೆಗೆಯಲಾಗಿದೆ.

- Advertisement -

Latest News

error: Content is protected !!