Thursday, November 26, 2026
Homeಕರಾವಳಿಮಂಗಳೂರುಕುಕ್ಕೆ ಚಂಪಾಷಷ್ಠಿ ಜಾತ್ರೆಗೆ ಸಕಲ ಸಿದ್ಧತೆ: ಬೆಂಗಳೂರು–ಕುಕ್ಕೆ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ದ್ವಿಗುಣ

ಕುಕ್ಕೆ ಚಂಪಾಷಷ್ಠಿ ಜಾತ್ರೆಗೆ ಸಕಲ ಸಿದ್ಧತೆ: ಬೆಂಗಳೂರು–ಕುಕ್ಕೆ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ದ್ವಿಗುಣ

- Advertisement -
- Advertisement -

ಸುಬ್ರಹ್ಮಣ್ಯ, ನವೆಂಬರ್ 26: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಡಿಸೆಂಬರ್ 5ರಿಂದ 21ರವರೆಗೆ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ಬೆಂಗಳೂರು–ಕುಕ್ಕೆ ನಡುವಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ತಿಳಿಸಿದ್ದಾರೆ.

ಬುಧವಾರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಬಿಸಿಲೆ ಮಾರ್ಗದಲ್ಲೂ ಹೆಚ್ಚುವರಿ ಬಸ್ ಹಾಗೂ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗುವುದು ಎಂದರು.

  • ನದಿ ಸ್ವಚ್ಛತೆ: ಕುಮಾರಧಾರ ನದಿಗೆ ಬಟ್ಟೆ ಎಸೆಯುವುದನ್ನು ತಡೆಯಲು ಸಿಸಿಟಿವಿ ಅಳವಡಿಸಲಾಗುವುದು ಹಾಗೂ ನಿಯಮ ಉಲ್ಲಂಘಿಸಿದರೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು.
  • ಸೇವೆಗಳು ಹಾಗೂ ನಿಷೇಧ: ಎಡೆಸ್ನಾನ, ಬೀದಿ ಉರುಳು ಸೇವೆಗಳು ಎಂದಿನಂತೆ ನಡೆಯಲಿದ್ದು, ಡಿ. 13ರಿಂದ 15ರವರೆಗೆ ಸುಬ್ರಹ್ಮಣ್ಯ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿದೆ.
  • ಇತರ ವ್ಯವಸ್ಥೆಗಳು: ಬ್ರಹ್ಮರಥೋತ್ಸವದ ವೇಳೆ ಆರೋಗ್ಯ ಕೌಂಟರ್, ಕೃಷಿ ಮೇಳ, ಅನ್ನದಾನಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ವ್ಯವಸ್ಥೆ ಮಾಡಲಾಗುವುದು.

ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಕರ್ತವ್ಯ ಲೋಪವೆಸಗಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಸಿ ಎಚ್ಚರಿಕೆ ನೀಡಿದರು.

- Advertisement -

Latest News

error: Content is protected !!