- Advertisement -


- Advertisement -
ಮಂಗಳೂರು;ಸುರತ್ಕಲ್ ಸಂತೆ ಮಾರುಕಟ್ಟೆಯಲ್ಲಿ ಸಾಮಾನು ಖರೀದಿಸುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 3.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಕಳ್ಳರು ಎಳೆದೊಯ್ದ ಘಟನೆ ಬುಧವಾರ ಸಂಜೆ ನಡೆದಿದೆ.
ಛತ್ತೀಸ್ಗಢ ಮೂಲದ, ಪ್ರಸ್ತುತ ಎನ್ಎಂಪಿಎ ಕಾಲೊನಿ ಬಳಿ ವಾಸವಿರುವ ಶುಭಾ ಶಹಾ (48) ಸರ ಕಳೆದುಕೊಂಡವರು. ಬೀದರ್ನಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿರುವ ಬಿಪಿನ್ ಶಹಾ ಅವರ ಪತ್ನಿಯಾಗಿರುವ ಇವರು, ಎನ್ಐಟಿಕೆ ವಿದ್ಯಾರ್ಥಿಯಾಗಿರುವ ತಮ್ಮ ಪುತ್ರ ಅಪಘಾತದಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಸುರತ್ಕಲ್ಗೆ ಬಂದಿದ್ದರು. ಬುಧವಾರ ಸಂಜೆ ಸಂತೆಗೆ ತೆರಳಿದ್ದಾಗ ದುಷ್ಕರ್ಮಿಗಳು 26 ಗ್ರಾಂ ತೂಕದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


