Friday, October 30, 2026
Homeಕರಾವಳಿಮಂಗಳೂರುಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಹೋಟೆಲ್‌ಗಳು!

ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಹೋಟೆಲ್‌ಗಳು!

- Advertisement -
- Advertisement -

ಬೆಂಗಳೂರು: ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹8 ರಷ್ಟು ಏರಿಕೆಯಾದ ಬೆನ್ನಲ್ಲೇ, ರಾಜ್ಯದ ಹೋಟೆಲ್‌ಗಳು ಕಾಫಿ, ಟೀ ಹಾಗೂ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಲು ಮುಂದಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತವಾಗಿದೆ.

ರಾಜ್ಯ ಸರ್ಕಾರ ಕೈಗೊಂಡಿರುವ ಏಕಾಏಕಿ ಬೆಲೆ ಏರಿಕೆಯ ನಿರ್ಧಾರವನ್ನು ಖಂಡಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಈ ಕ್ರಮದಿಂದಾಗಿ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದಿದೆ. ಹಾಲಿನ ದರ ಏರಿಕೆಯ ಜೊತೆಗೆ ಇತ್ತೀಚೆಗೆ ಅಕ್ಕಿಯ ಬೆಲೆಯೂ ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಕಾಫಿ, ಟೀ ಸೇರಿದಂತೆ ಹಾಲಿನಿಂದ ತಯಾರಾಗುವ ಎಲ್ಲಾ ಪಾನೀಯಗಳು ಹಾಗೂ ತಿನಿಸುಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸಂಘ ಸ್ಪಷ್ಟಪಡಿಸಿದೆ.

ಹಾಲಿನ ಬೆಲೆ ಏರಿಕೆಯನ್ನು ₹2 ರಿಂದ ₹3ಕ್ಕೆ ಸೀಮಿತಗೊಳಿಸಿದ್ದರೆ ಸಾರ್ವಜನಿಕರಿಗೆ ಹಾಗೂ ಉದ್ಯಮಕ್ಕೆ ಹೊರೆಯಾಗುತ್ತಿರಲಿಲ್ಲ. ಆದರೆ, ಸರ್ಕಾರದ ಈ ಬೃಹತ್ ಬೆಲೆ ಏರಿಕೆಯು ಜನಸಾಮಾನ್ಯರು, ಹಿರಿಯ ನಾಗರಿಕರು ಮತ್ತು ದಿನನಿತ್ಯ ಹೋಟೆಲ್ ಆಹಾರವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಗ್ರಾಹಕರ ಜೇಬಿಗೆ ನೇರ ಹೊಡೆತ ನೀಡಿದೆ. ಸರ್ಕಾರ ತಕ್ಷಣವೇ ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚಗಳನ್ನು ನಿಯಂತ್ರಿಸಿ, ಹಾಲಿನ ಬೆಲೆ ಏರಿಕೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಹೋಟೆಲ್ ಮಾಲೀಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!