Friday, October 30, 2026
Homeಕರಾವಳಿಮಂಗಳೂರುಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ -ಬೈಪಾಡಿಯ ಸೃಷ್ಟಿ.ಪಿ.ಹೊಳ್ಳ ರವರು...

ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ -ಬೈಪಾಡಿಯ ಸೃಷ್ಟಿ.ಪಿ.ಹೊಳ್ಳ ರವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

- Advertisement -
- Advertisement -

ಬೆಳ್ತಂಗಡಿ; ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ 2026ರ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ -ಬೈಪಾಡಿಯ ನಿವಾಸಿ ಸೃಷ್ಟಿ ಪಿ ಹೊಳ್ಳ ರವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಇವರು ಭರತನಾಟ್ಯ ತರಬೇತಿಯನ್ನು ವಿದುಷಿ , ಶ್ರೀಮತಿ ಅಮೃತ ಆಚಾರ್ಯ ಕೊಯ್ಯೂರು ಹಾಗೂ ವಿದುಷಿ , ಶ್ರೀಮತಿ ಶಾಲಿನಿ ಆತ್ಮಭೂಷಣ್ ಪುತ್ತೂರು ಇವರಿಂದ ಪಡೆದಿರುತ್ತಾರೆ. ಕು.
ಸೃಷ್ಟಿ.ಪಿ.ಹೊಳ್ಳ ರವರು ದೇವಸ್ಥಾನದ ಅರ್ಚಕರಾದ ಬಂದಾರು ಗ್ರಾಮದ ಪೆರ್ಲ -ಬೈಪಾಡಿಯ ಶ್ರೀ ದುರ್ಗಾನುಗ್ರಹ ನಿಲಯ ನಿವಾಸಿ ಶ್ರೀ ಪ್ರಶಾಂತ್ ಹೊಳ್ಳ ಹಾಗೂ ಶ್ರೀಮತಿ ಮೇಘನ ಪ್ರಶಾಂತ್ ಹೊಳ್ಳ ದಂಪತಿಯ ಪುತ್ರಿಯಾಗಿದ್ದು, ಉಜಿರೆ ಎಸ್‌.ಡಿ.ಎಂ (ಸಿಬಿಎಸ್ಸಿ ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

- Advertisement -

Latest News

error: Content is protected !!